ಕಾಯಕ ಶರಣರ ಐಡಿಯಾಲಜಿಗಳಲ್ಲಿ ವಾಸ್ತವತೆ: ಮಹಿಪಾಲರೆಡ್ಡಿ

ಕಲಬುರಗಿ:ಫೆ.10: ಕಾಯಕ ಶರಣರ ವಚನಗಳು ವಾಸ್ತವತೆಯ ಪ್ರತೀಕ. ಆ ಶರಣರ ವಚನಗಳ ಐಡಿಯಾಲಜಿಗಲ್ಲಿ ವಾಸ್ತವವಾದಿಗಳಾಗಿವೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಶನಿವಾರದಂದು ಡಾ. ಎಸ.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರುಗಳ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ, ಹರಳಯ್ಯ, ಉರಿಲಿಂಗಪೆದ್ದಿ, ಅವರು ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಮಾದಾರ ಚನ್ನಯ್ಯನ ವಚನಗಳ ವಿಚಾರಧಾರೆ ಸ್ವತಂತ್ರವಾಗಿದೆ. ತಾತ್ವಿಕ ವಿವೇಚನೆಯಿಂದ ಕೂಡಿದೆ. ಆತ್ಮೋನ್ನತಿಯ ಜೊತೆಯಲ್ಲಿ ಲೋಕೋನ್ನತಿಯ ದೃಷ್ಟಿಕೋನ ಹೊಂದಿರುವ ಅವುಗಳೆಂದರೆ ಜ್ಞಾನೋಪದೇಶವಿದೆ ಎಂದು ಹೇಳಿದರು.
ವಚನಗಳಲ್ಲಿ ಸೈದ್ದಾಂತಿಕ ನೆಲೆಯ ವೈಚಾರಿಕತೆಯೊಂದಿಗೆ ಆಳವಾದ ಆಧ್ಯಾತ್ಮಿಕ ಅನುಭಾವವನ್ನು ಮನಗಾಣಬಹುದು ಎಂದರು.

ಉರಿಲಿಂಗಪೆದ್ದಿ ಮಠ ಕೋಡ್ಲಾ ಉಪಾಧ್ಯಕ್ಷರ ಮಾತನಾಡಿ, ಶಂಕರ ಕೋಡ್ಲಾ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಕಾಯಕ ಶರಣರ ಜಯಂತಿಯನ್ನು ಆಚರಿಸುತ್ತಿರುವುದು ಸಂತೋಷ ವಿಷಯವೆಂದರು.
ಕಾಯಕ ಶರಣರುಗಳ ಜಯಂತಿಯನ್ನು ಪ್ರತಿಯೊಬ್ಬರು ಆಚರಿಸಬೇಕು. 12 ಶತಮಾನದ ಬಸವಣ್ಣವ ಕಾಲದಲ್ಲಿ ಕಾಯಕ ಶರಣರು ತಮ್ಮ ಕಾಯಕ ಮೂಲಕವೇ ವಚನಗಳನ್ನು ರಚಿಸಿದರು ಇಂತಹ ಶರಣರುಗಳ ಆದರ್ಶವನ್ನು ನಾವು ಪಾಲಿಸಬೇಕೆಂದರು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಶ್ರೀ ಗುರುಮಾತೆ ನಂದಾ ತಾಯಿ ಅವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಅಖಿಲ ಭಾರತ ಬಸವ ಮಾದಾರ ಚನ್ನಯ್ಯ ಸಮಾಜದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಶರಣರು ನೀಡಿದ ಕೂಡುಗೆಗಳನ್ನು ಪ್ರತಿಯೊಬ್ಬರು ತಪ್ಪದೇ ಪಾಲಿಸಬೇಕೆಂದರು.
ಉರಿಲಿಂಗಪೆದ್ದಿ ಮಠ ಕೋಡ್ಲಾ ಉಪಾಧ್ಯಕ್ಷರಾದ ಶಂಕರ ಕೋಡ್ಲಾ ಅಧಿಕಾರಿಗಳಿಗೆ ಅಧ್ಯಕ್ಷರಿಗೆ ಸನ್ಮಾನಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಸ್ವಾಗತಿಸಿದರು.
ವೇದಿಕೆ ಮೇಲೆ ಕಲಬರುಗಿ ಗ್ರೇಡ್-1 ತಹಶೀಲ್ದಾರ ಮಾಧವ ರಾಜ್  ಶರಣ ಡೋಹರ ಕಕ್ಕಯ್ಯಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಸಾಯಬಣ್ಣ ಹೋಳ್ಕರ್, ಶರಣ ಮಾದಾರ ಧೂಳಯ್ಯ ದೇವಸ್ಥಾನ ಟ್ರಸ್ಟ್  ಅಧ್ಯಕ್ಷ ಸಾಯಬಣ್ಣ ಹೋಳ್ಕರ್, ಜಿಲ್ಲಾ ಸಮಗಾರ ಹರಳಯ್ಯ ಅಧ್ಯಕ್ಷರಾದ ಕಾಶಿರಾಯ ನಂದೂರಕರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಮಾಜ ಮುಖಂಡರು ಭಾಗವಹಿಸಿದ್ದರು.