ಕಾಯಕ, ದಾಸೋಹ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ:ಕಿತ್ತೂರ

ತಾಳಿಕೋಟೆ:ಸೆ.15: ಕಾಯಕ ಮತ್ತು ದಾಸೋಹ ಎಂಬುದು ಬಧುಕಿನಲ್ಲಿ ಎಲ್ಲರೂ ಅಳವಡಿಸಿಕೊಂಡು ಸಾಗಬೇಕಿದೆ ಇದರಿಂದ ಮನುಷ್ಯನಲ್ಲಿರುವ ಕಲ್ಮಷ ಭಾವನೆ ದೂರಾಗಿ ಶರಣರು ಹಾಕಿಕೊಟ್ಟ ದಾರಿಯಲ್ಲಿ ಸಾಗಲು ಅನುಕೂಲವಾಗಲಿದೆ ಎಂದು ಸಾಹಿತಿ ರುದ್ರೇಶ ಕಿತ್ತೂರ ಅವರು ಹೇಳಿದರು.
ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾ ಭವನದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾದ ವಚನ ಶ್ರಾವಣ ಸಂಭ್ರಮ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಶರಣರು ನುಡಿದು ನಡೆದವರಲ್ಲ, ನಡೆದು ನುಡಿದವರಾಗಿದ್ದಾರೆ ಅಂತರಂಗ ಮತ್ತು ಬಹಿರಂಗ ಎರಡನ್ನು ಒಂದಾಗಿಸಿಕೊಂಡು ಸಮಾಜದ ಒಳಿತಿಗಾಗಿ ತಮ್ಮ ಇಡೀ ಜೀವನವನ್ನು ಸವಿಸಿದವರಾಗಿದ್ದಾರೆ ಮನುಷ್ಯನಲ್ಲಿ ಮೊದಲು ಕಾಯಕವೆಂಬುದು ಇರಬೇಕು ಅದರ ಜೊತೆಗೆ ತನ್ನ ದುಡಿಮೆಯ ಅಲ್ಪ ಭಾಗವನ್ನು ದಾಸೋಹಕ್ಕಾಗಿ ಬಳಿಸಬೇಕು ಇದು ಯಾರೂ ಹೇಳಿದ್ದಲ್ಲಾ ಶರಣರು ಬಧುಕಿನಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ದಾಸೋಹದ ಪರಿಕಲ್ಪನೆಯನ್ನು ಸಾರಿದ್ದಾಗಿದೆ ದಾಸೋಹವೆಂಬುದು ಯಾರಲ್ಲಿ ಇರುತ್ತದೆಯೋ ಅವರು ಸಾರ್ಥಕವಾದ ಬಧುಕನ್ನು ನಡೆಸಲಿದ್ದಾರೆಂದರು.
ಸಾನಿಧ್ಯ ವಹಿಸಿದ್ದ ಕೈಲಾಸಪೇಠೆಯ ಶ್ರೀ ಬಸವಪ್ರಭು ದೇವರು, ಗಡಿ ಸೋಮನಾಳದ ಶ್ರೀ ಇಂದುಧರ ಮಹಾ ಸ್ವಾಮಿಗಳು ಆಶಿರ್ವಚನವಿಯುತ್ತಾ ಶರಣರ ದಾರ್ಶನಿಕರ ಬಧುಕಿನ ದಾರಿಯನ್ನು ಸಮಾಜಕ್ಕೆ ಪರಿಚಯಿಸುವದರೊಂದಿಗೆ ಸಮಾಜದಲ್ಲಿ ಹೊಸ ಆಯಾಮವನ್ನು ಸೃಷ್ಠಿಸುವಂತಹ ಕೆಲಸ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಾ ಸಾಗಿರುವದು ಶ್ಲಾಘನೀಯವಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷರಾಗಿ ಜಗದೀಶ ಬಿಳೇಭಾವಿ, ಉಪಾಧ್ಯಕ್ಷರುಗಳಾದ ರಾಜಶೇಖರ ಸಜ್ಜನ, ಜಗದೀಶ ಕಟ್ಟಿಮನಿ, ಮಹಾಂತೇಶ ಮುರಾಳ, ಚೇತನ ಜಿಗಜಿನ್ನಿ, ಮಂಜು ಶೆಟ್ಟಿ, ಕಾರ್ಯದರ್ಶಿ ಅಪ್ಪಣ್ಣ ಕಲ್ಲೂರ, ಮುತ್ತು ಬಿರಾದಾರ, ಪ್ರಭು ಸಣ್ಣಕ್ಕಿ, ಅಶೋಕ ಚಿನಗುಡಿ, ಕಾಶಿನಾಥ ಸಜ್ಜನ, ಸಾಹಿಲ್ ಮುರಾಳ, ಭೀಮಣ್ಣ ಸೂಳಿಭಾವಿ, ರಾಘವೇಂದ್ರ ಬಾಕಲಿ, ಶಿನಯೋಗಿ ದೇವರಕರ, ಪ್ರಭುಗೌಡ ಕಾಮನಟಗಿ ಅವರು ಪಧಗ್ರಹಣ ಮಾಡಿದರು. ನೂತನ ಯುವ ಘಟಕದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಹಿರಿಯ ವೈಧ್ಯರಾದ ಡಾ.ವಿಜಯಕುಮಾರ ಕಾರ್ಚಿ, ಅಶೋಕ ಹಂಚಲಿ, ಉಮಾ ಘಿವಾರಿ, ಜಗದೀಶ ಬಿಳೇಭಾವಿ, ಹುಣಸಗಿಯ ನಾಗನಗೌಡ, ಶ್ರೀನಿವಾಸ ಬಸಂತಪೂರ, ಅವರು ಉಪಸ್ಥಿತರಿದ್ದರು.
ಗಿರಿಜಾ ಸಜ್ಜನ ಪ್ರಾರ್ಥಿಸಿದರು. ಸೋಮಶೇಖರಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.