ಕಾಯಕ- ದಾಸೋಹ ತತ್ವ ಸಮಾಜಕ್ಕೆ ದಾರಿದೀಪ

ಕಲಬುರಗಿ:ಮೇ.10: ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಹಿಳಾ ವಸತಿ ನಿಲಯದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಮತ್ತು ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಡಾ.ವಿಶಾಲಾಕ್ಷಿ ಕರಡ್ಡಿಯವ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಮತ್ತು ಬಸವಣ್ಣನವರ ಕುರಿತು ಮಾತನಾಡಿದರು. ಕಾಯಕ ಮತ್ತು ದಾಸೋಹದ ಜೊತೆಗೆ ಸಹನೆ ಎಂಬ ಸಂಗತಿಗಳು ಇಂದಿನ ಸಮಾಜಕ್ಕೆ ಅವಶ್ಯವಾಗಿವೆ ಎಂದರು. ಡಾ.ಶೈಲಜಾ ರಾಜಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮುಂದಿನ ನಡೆ ಮತ್ತು ಕಾರ್ಯಯೋಜನೆ ಬಗ್ಗೆ ಮುಂದಿಟ್ಟರು. ಬಸವಾದಿ ಶರಣರ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಶರಣ ತತ್ವಗಳನ್ನು ಸ್ಮರಿಸಿದರು. ಭಾರತಿ ಶರಣಬಸಪ್ಪ ದರ್ಶನಾಪುರ ಸ್ವಾಗತಿಸಿದರು. ಅರುಣಾ ಅವಂತಿ ವಂದಿಸಿದರು. ಸಲ್ಲಿಸಿದರು. ಸರೋಜಾ ಜಕರಡ್ಡಿ ನಿರೂಪಿಸಿದರು. ಶರಣಮ್ಮ ಪಾಟೀಲ ಮತ್ತು ಸಂಸ್ಥೆಯ ಇತರೆ ನಿರ್ದೇಶಕರು ಉಪಸ್ಥಿತರಿದ್ದರು.