ಕಾಯಕ ದಾಸೋಹದಲ್ಲಿ ದೇವರನ್ನು ಕಂಡ ದಾಸಿಮಯ್ಯ

ಗುಳೇದಗುಡ್ಡ, ಏ18: ಕನ್ನಡ ನಾಡಿನಲ್ಲಿ ಅನೇಕ ಸಂತರು, ಶರಣರು ಮನುಕುಲ ಕಲ್ಯಾಣಕ್ಕಾಗಿ ತಮ್ಮ ಶ್ರಮ ಜೀವನ ಸವಿಸಿದವರಲ್ಲಿ ದೇವರ ದಾಸಿಮಯ್ಯ ಒಬ್ಬರು. ರೈತ ಮತ್ತು ನೇಕಾರ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಇಡೀ ಮನುಕುಲಕ್ಕೆ ಶ್ರಮ ಸಂಸ್ಕøತಿ, ಕಾಯಕ ದಾಸೋಹದ ಪರಿಕಲ್ಪನೆ ಮಾಡಿಕೊಟ್ಟ ಮೊದಲ ಶರಣ ದೇವರ ದಾಸಿಮಯ್ಯ ಆಗಿದ್ದಾರೆ ಎಂದು ಗುರುಸಿದ್ದೇಶ್ವರ ಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕ ಕಚೇರಿಯಲ್ಲಿ ತಾಲ್ಲೂಕ ಆಡಳಿತ ಹಾU ನೇಕಾರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಉತ್ಸವದ ಸಾನ್ನಿಧ್ಯ ವಹಿಸಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಮನುಕುಲ ಕಲ್ಯಾಣ ಕ್ಕಾಗಿ ಶ್ರಮಿಸಿದ ಸಂತರ, ಶರಣರ ಜಯಂತಿ ಆಚರಿಸುವ ಪರಂಪರೆ ಇಂದಿಗೂ ಬೆಳೆದುಕೊಂಡು ಬಂದಿದೆ. ಆದ್ಯ ವಚನಕಾರ ದೇವರ ದಾಸಿಮಯ್ಯನವರು ಕಾಯಕ ದಾಸೋಹದಲ್ಲಿ ದೇವರನ್ನು ಕಂಡಂತವರು. ಪ್ರತಿಯೊಬ್ಬರು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹೇಳಿದರು.
ತಹಶೀಲ್ದಾರ್ ಜಿ. ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಶರಣ ದೇವರ ದಾಸಿಮಯ್ಯನವರು ಕಾಯಕ ದಾಸೋಹ ಮಾಡುವ ಮೂಲಕ ಸಮಾಜಕ್ಕೆ ವಚನ ಸಾಹಿತ್ಯದ ಕೊಡುಗೆ ಬಹು ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.
ನೇಕಾರ ಮುಖಂಡರು ಚಂದ್ರಕಾಂತ ಶೇಖಾ, ಪುರಸಭೆ ಸದಸ್ಯ ಉಮೇಶ ಹುನಗುಂದ, ಆನಂದ ತಿಪ್ಪಾ, ಸೋಮಶೇಖರ ಕಲಬುರ್ಗಿ, ಗುರು ಕಾಳಿ, ಪ್ರಕಾಶ ರೋಜಿ, ಸಂಗಮೇಶ ಗೌಡರ, ಈರಣ್ಣ ಶೇಖಾ, ಪ್ರಕಾಶ ಬೀಳಗಿ, ಸಚಿನ ರಾಂಪೂರ, ವಿಷ್ಣು ಬಳಿಗೇರ, ಶ್ರೀಕಾಂತ ಹುನಗುಂದ, ಹನಮಂತ ಫಲಮಾರಿ, ಎಂ.ವೈ. ದೇವರಗಡ್ಡಿ, ವಿ.ಎ. ಸುಗ್ಗಂ, ಕೆ.ಆರ್. ಗುರಂ ಹಾಗೂ ಉಪತಹಶೀಲ್ದಾರ್ ವೀರೇಶ ಬಡಿಗೇರ, ಸಿರಸ್ಥೇದಾರ ಸುಭಾಸ ವಡವಡಗಿ, ಗ್ರಾಮ ಲೆಕ್ಕಾಧಿಕಾರಿಗಳು ಪಾಲ್ಗೊಂಡಿದ್ದರು.