ಕಾಯಕ ಜೀವಿಗಳ ಗುರುತಿಸಿ ಸನ್ಮಾನಿಸುವುದು ಶ್ರೇಷ್ಠ ಕಾರ್ಯ

ದಾವಣಗೆರೆ.ಮೇ.೪; .ಸಮಾಜದ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾಯಕ ಜೀವಿಗಳನ್ನು ಗುರುತಿಸಿ ಸನ್ಮಾನಿಸುವುದು ಶ್ರೇಷ್ಠ ಕಾರ್ಯ ಎಂದು ಕಲಾ ಪ್ರಕಾಶ ವೃಂದದ ಅಧ್ಯಕ್ಷ ರಮಣ್ ಲಾಲ್ ಪಿ. ಸಾಂಘವಿ ಹೇಳಿದರು. ನಗರದ ಭಾರತ ಸೇವಾದಳ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಎ.ಕೆ.ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿರುವ ನಾನಾ ವರ್ಗ ಶ್ರಮಿಕ ಜೀವಿಗಳು ಎಲೆ ಮರೆಯಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಂಥವರ ಸೇವೆ ಪಡೆದ ಸಮಾಜ ಅವರಿಗೆ ಋಣಿಯಾಗಿರಬೇಕು. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಕಾಯಕ ಜೀವಿಗಳನ್ನು ಗುರುತಿಸಿ ಅಭಿನಂದಿಸುವುತ್ತಿರುವುರು ಶ್ಲಾಘನೀಯ ಎಂದರು.ಅAಗವಿಕಲರ ಆಶಾ ಕಿರಣ ಟ್ರಸ್ಟ್ನಲ್ಲಿರುವ ವಿಶೇಷ ಚೇತನ ಮಕ್ಕಳು ಅನೇಕ ಸಾಧನೆಗಳನ್ನು ಮಾಡಿರುವುದು ಸಂಸ್ಥೆಗೆ ಹೆಮ್ಮೆ ತರವು ವಿಚಾರವಾಗಿದೆ. ಟ್ರಸ್ಟಿನಲ್ಲಿರುವ ಒಬ್ಬರು ವಿಶೇಷ ಚೇತನ ಮಕ್ಕಳು ಅಮೇರಿಕಾ ಮತ್ತು ಚೀನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಂಗಾರ ಮತ್ತು ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ. ಭಾರತ ಸೇವಾದಳ ಸಾಕಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಸಂಸ್ಥಾಪಕ ಕೆ.ಆರ್.ಜಯದೇವಪ್ಪ ಅವರ ಹೆಸರು ಉಳಿಸುವ ಕೆಲಸ ಮಾಡುತ್ತಿದ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವರ್ತಕ ಎಸ್.ಟಿ.ಕುಸುಮಶ್ರೇಷ್ಠಿ ಮಾತನಾಡಿ, ಎಂಥಹುದೇ ಉದ್ದಿಮೆ, ವ್ಯವಹಾರ ಮಾಡಿದರೂ ಕೂಡ ಅಲ್ಲಿ ಶ್ರಮಿಕ ವರ್ಗ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ. ಯಾವುದೇ ವ್ಯವಹಾರದಲ್ಲಿ ಬಂಡವಾಳ ಹಾಕುವವರು ಮತ್ತು ಕಾರ್ಮಿಕ ಹೀಗೆ ಎರಡೂ ವರ್ಗ ಬೇಕು.ಆದರೆ ಶ್ರಮಿಕ ವರ್ಗದ ಕೆಲಸ ದೊಡ್ಡದಾಗಿರುತ್ತದೆ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸೇವಾದಳ ಭವನವನ್ನು ಉಚಿತವಾಗಿ ನೀಡುವ ಸಂಬAಧ ಮನವಿ ಮಾಡಲಾಗಿದ್ದು,ಶೀಘ್ರವೇ ಈ ಕಾರ್ಯ ನೆರವೇರುವ ಭರವಸೆ ಇದೆ ಎಂದು ಹೇಳಿದರು.ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿನೋದಾ ಅಜಗಣ್ಣನವರ್ ಮಾತನಾಡಿ, ಜವಾನನಿಂದ ದಿವಾನನವರೆಗೆ ಎಲ್ಲ ಕೆಲಸ ಮಾಡುವವರೂ ಒಂದೇ ಎಂದು ಬಸವಣ್ಣ ಪರಿಗಣಿಸಿದ್ದರು. ಅವರ ಅನುಭವ ಮಂಟಪದಲ್ಲಿ ಎಲ್ಲ ಕಾಯಕದವರಿಗೂ ಒಂದೇ ಗೌರವ, ಸ್ಥಾನಮಾನ ಇತ್ತು. ಭೂಮಿ ಮೇಲಿರುವ ಎಲ್ಲರೂ ಕಾಯಕ ಮಾಡಲೇ ಬೇಕು. ದುಡಿಯದೆ ಬದುಕುವ ಹಕ್ಕು ಯಾರಿಗೂ ಇಲ್ಲ ಎಂದು ಬಸವಣ್ಣ ಪ್ರತಿಪಾದಿಸಿದ್ದರು ಎಂದರು.ಕೆಲವರು ಪೂಜೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆದರೆ, ಕಾಯಕವನ್ನೇ ದೇವರು ಎಂದುಕೊAಡು ಪೂಜೆ ಮಾಡಬೇಕು ಎಂದು ಜಗತ್ತಿಗೆ ಸಾರಿದವರು ಬಸವಣ್ಣ. ಹೀಗೆ ಕಾಯಕ ತತ್ವದ ಆಧಾರದಲ್ಲಿ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರಮಿಕರನ್ನು ಗುರುತಿಸಿ ಒಂದೇ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.ಎ.ಕೆ.ಫೌಂಡೇಷನ್ ಸಂಸ್ಥಾಪಕ ಕೆ.ಬಿ.ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪರಶುರಾಮ್ ಖಟಾವ್ ಕರ್,ಶಿಕ್ಷಕ ಕೆ.ಟಿ.ಜಯಪ್ಪ, ನಿವೃತ್ತ ಶಿಕ್ಷಕ ಎಚ್.ಹನುಮಂತಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆ.ಟಿ.ಗೋಪಾಲಗೌಡ, ಗಡಿ ಭದ್ರತಾ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್, ದಾವಣಗೆರೆಯ ವಿದ್ಯಾನಗರ ನಿವಾಸಿ ಡಾ. ಮೃದುಲಾ ಲಿಂಗರಾಜ್  ಸೇರಿದಂತೆ 6 ಜನರನ್ನು ಸನ್ಮಾನಿಸಲಾಯಿತು.