ಕಾಯಕ (ಕ್ಯಾಲೆಂಡರ್) ದಿನದರ್ಶಿಕೆ ಬಿಡುಗಡೆ

ಕಲಬುರಗಿ,ಜ.1:ಕಾಯಕ ಫೌಂಡೇಷನ್ ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ವಿಜ್ಞಾನ & ವಾಣಿಜ್ಯ ಕಾಲೇಜಿನಲ್ಲಿ 2023 ವರ್ಷದ “ಕಾಯಕ (ಕ್ಯಾಲೆಂಡರ್) ದಿನದರ್ಶಿಕೆ”ಯನ್ನು ಕರ್ನಾಟಕ ರಾಜ್ಯ ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ. ಮಹೇಶ ಹೂಗಾರ ಅವರು ಕಾಯಕ ಕ್ಯಾಲೇಂಡರ ಬಿಡುಗಡೆ ಮಾಡಿದರು, ಅವರು ಮಾತನಾಡುತ್ತ ಮಕ್ಕಳು ಉತ್ತಮ ಗುರಿಯನ್ನು ಇಟ್ಟಿಕೊಂಡು ತಮ್ಮ ಸಾಧನೆ ಮಾಡಿದಾಗ ಮಾತ್ರ ತಮ್ಮ ಜೀವನ ಉತ್ತಮವಾಗುತ್ತದೆ. ಎಂದು ಹೇಳಿದರು.
ಎಸ್.ಕೆ.ಯು.ಪಿ.ಎಸ್ ಸಂಘದ ಸಂಸ್ಥಾಪಕರಾದ ಶ್ರೀ. ಗುರುಪಾದಪ್ಪ ಕೋಗನೂರ ಹೊಸ ಶಿಕ್ಷಣ ನೀತಿಯಿಂದ ಮಕ್ಕಳಲ್ಲಿ ಕೌಶಲ್ಯ ಜ್ಞಾನದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಶ್ರೀ. ಸಿದ್ದಲಿಂಗ ಬಾಳಿ, ಶಿಕ್ಷಕರು ಮಾತನಾಡುತ್ತ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾಯಕ ಫೌಂಡೇಷನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶ್ರೀ. ಶಿವರಾಜ ಟಿ. ಪಾಟೀಲ ಮಾತನಾಡಿ ಮಕ್ಕಳು ಉತ್ತಮ ಮೌಲ್ಯಗಳನ್ನು ತಮ್ಮ ಜೀವನ ಉದ್ದಕ್ಕೂ ಅಳವಡಿಸಿಕೊಂಡರೆ ಭಾರತವು (SUPER POWER) ಭಾರತವಾಗುವುದರಲ್ಲಿ ಅನುಮಾನವಿಲ್ಲವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಸಪ್ನಾರೆಡ್ಡಿ ಎಸ್. ಪಾಟೀಲ ವಹಿಸಿದ್ದರು.
ಅತಿಥಿಗಳಾಗಿ, ಶ್ರೀ.ಸಂತೋಷ ಶಿರನಾಳ, ಶ್ರೀ. ಗಿರಿಮಲ್ಲಪ್ಪ ಯಳಸಂಗಿ, ಶ್ರೀ. ಚನ್ನಬಸಪ್ಪ, ಶ್ರೀ. ರಾಜಶೇಖರ ಬಿರಾದಾರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಕಾಲೇಜಿನ ಪ್ರಾಚಾರ್ಯರು ಶ್ರೀ. ನಾಗರಾಜ ಎಂ. ಕಾಮಾ ಅವರು ಸ್ವಾಗತಿಸಿದರು. ನಿರೂಪಣೆ ಕುಮಾರಿ. ಮಾನಸ ಮತು ಕುಮಾರಿ. ಇಂದುಶ್ರೀ. ನಡಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ. ಸಂತೋಷ ಹೂಗಾರ, ಶ್ರೀ ಮಹಾದೇವ ಚಿಂಚೋಳಿ, ಶ್ರೀ. ಶಿವಬಸಪ್ಪ ಟಕ್ಕಳಿಗೆ, ಶ್ರೀ. ಶರಣು ಉದನೂರ. ಡಾ|| ರಾಜಕುಮಾರ ಪಾಟೀಲ, ಶ್ರೀ. ಚಂದ್ರಶೇಖರ ಕಲಶೆಟ್ಟಿ, ಶ್ರೀ. ಲೋಹಿತ ಪೂಜಾರಿ & ಶ್ರೀ. ರೇವಣಸಿದ್ದ ಪಾಟೀಲ, ಶ್ರೀ. ಸುಭಾಷ ರೆಡ್ಡಿ. ಶ್ರೀ ವಿರೇಶ ಕಲಕೋರಿ, ಶ್ರೀ. ಗೋವಿಂದ ಕುಲಕರ್ಣಿ ಮತ್ತು ಶ್ರೀ. ಎ.ಡಿ. ಪಾಟೀಲ ಭಾಗವಹಿಸಿದ್ದರು.