ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ
ಮಾನ್ವಿಜ.೨೮- ಹನ್ನೆರಡನೇ ಶತಮಾನದ ಕಾಯಕಯೋಗಿ ಸಿದ್ದರಾಮೇಶ್ವರರು ಶ್ರೇಷ್ಠ ವಚನಕಾರರಾಗಿದ್ದಾರೆ ಎಂದು ವಿರೂಪಾಕ್ಷ ಪಂಡಿತಾರಧ್ಯ ಶಿವಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು, ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದರು. ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು, ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಎಂದರು.
ನಂತರ ಶಿವರಾಜ ಸಾಹುಕಾರ ಮಾತಾನಾಡಿ ಪ್ರಸ್ತುತ ದಿನಗಳಲ್ಲಿ ಶರಣರನ್ನು, ಮಹಾಪುರುಷರನ್ನು ನೆನೆಯುವು ಪುಣ್ಯಸ ಕಾರ್ಯಸೇವೆಯಾಗಿದೆ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷವಾಗಿದೆ ಎಂದರು ನಂತರ ಮೆರವಣಿಗೆಯ ಮೂಲಕ ಕಾರ್ಯಕ್ರಮದ ಸ್ಥಳವಾದ ಟಿ ಎ ಪಿ ಎಂ ಎಸ್ ಆವರಣದವರೆಗೂ ಮೆರವಣಿಗೆ ನಡೆಸಿದರು ನಂತರ ಕಾರ್ಯಕ್ರಮದಲ್ಲಿ ಉಪನ್ಯಾಕರಾದ ಬಸವರಾಜ ಸುಕೇಶ್ವರ ಶರಣರ ಕುರಿತು ಉಪನ್ಯಾಸ ನೀಡಿದರು ನಂತರ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಉತ್ತಮ ಸಾಧಕರಿಗೆ ಸನ್ಮಾನಿಸದರು.
ಈ ಸಂದರ್ಭದಲ್ಲಿ ಮುಖಂಡರಾದ ಆಚರಣೆ ನಿಲೋಗಲ್, ಎಸ್.ತಿಮ್ಮರಡ್ಡಿ ಬೋಗವತಿ,ಹನುಮಂತ ಜೂಕೂರು, ಪುರಸಭೆ ಸದಸ್ಯ ಬಸಮ್ಮ ಹನುಮಂತ, ಹನುಮಂತ ಸಣ್ಣಳ್ಳಿ, ಗೂಳಪ್ಪ ನೀರಮಾನ್ವಿ, ಶರಣಬಸವ ನೀರಮಾನ್ವಿ, ಮರಿಸ್ವಾಮಿ ಮದ್ಲಾಪೂರ, ಅಮರೇಶ, ಅಂಜನೇಯ, ದಂಡಧಿಕಾರಿ ರಾಜು ಪಿರಂಗಿ, ಪಿ.ಐ.ವೀರಭದ್ರಯ್ಯ ಸ್ವಾಮಿ ಹಿರೇಮಠ, ಪುರಸಭೆ ಅಧಿಕಾರಿ ಗಂಗಾಧರ, ಸೇರಿದಂತೆ ನೂರಾರು ಬೋವಿ ಸಮಾಜದ ಮುಖಂಡರು ಇದ್ದರು.