ಕಾಯಕದಿಂದ ಬಂದದ್ದು ದಾಸೋಹವಾಗುತ್ತದೆ:ಪಡೇಕನೂರಶ್ರೀ

ತಾಳಿಕೋಟೆ:ಮಾ.11: 12ನೇ ಶತಮಾನದ ಅಲ್ಲಮಪ್ರಭು ದೇವರು ಗಳಿಸಿಕೊಂಡಿರತ್ತಕ್ಕಂತ್ತದ್ದನ್ನು ಲೋಕದ ಮಾನವರಿಗೆ ಗಳಿಸಲು ಹೇಳಿದರೆಂದು ಪಡೆಕನೂರ ದಾಸೋಹ ಮಠದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ನುಡಿದರು.
ಶುಕ್ರವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 18ನೇ ದಿನದಂದು ಮುಂದುವರಿಸಿ ಮಾತನಾಡುತ್ತಿದ್ದ ಅವರು ಆತ್ಮಸಾಕ್ಷಾತ್ಕಾರ ಪಡೆದು ಲೋಕಕ್ಕೆ ಹಂಚುವವರಿಗೆ ಜ್ಞಾನಿಗಳೆನ್ನುತ್ತಾರೆ. ಇದರಿಂದ ಆತ್ಮತೃಪ್ತಿ ಪಡೆಯಲೆಂದು ತಾನು ಗಳಿಸಿದಂತ ಶೂನ್ಯ ತತ್ವಜ್ಞಾನವನ್ನು ಈ ಲೋಕಕ್ಕೆ ಹೇಳಿಹೋಗಿದ್ದಾರೆ. ಎಲ್ಲರೂ ಅದನ್ನು ಪಡೆಯಬೇಕಾಗಿದೆ ಎಂದರು. ಮನಸ್ಸು ಭಾವ ಜ್ಞಾನೇಂದ್ರೀಯಗಳು ಇವೆಲ್ಲವೂ ತಯಾರಿ ಸಂಸ್ಕಾರಗೊಂಡಿರಬೇಕೆಂದರು. ಮನಸ್ಸು ಜ್ಞಾನದಲ್ಲಿ ಯೋಗದಲ್ಲಿ ಪೂಜೆಯಲ್ಲಿ ಎಷ್ಟು ಸಮಯ ನಿಲ್ಲುತ್ತದೆ ಅದರ ರೂಪಹೋಗಿ ದೇವಿಎನ್ನುವುದನ್ನು ಭಗವಂತ ವರ್ಣನೆ ಮಾಡುತ್ತಾನೆಂದರು. ಇಂದ್ರೀಯ ಚಲನ ವಲನ ಗಾಳಿಯ ರೂಪದಲ್ಲಿ, ನೀರಿನ ರೂಪದಲ್ಲಿ ಮನಸ್ಸೆಂಬುದು ಸಂಚಾರಮಾಡುತ್ತದೆ. ಹಳ್ಳ ಹೊಳಿಗಳೂ ಹರಿಯುತ್ತಿರುವ ವೇಗಕ್ಕಿಂತಲೂ ಹೆಚ್ಚಿಗೆ ಲಕ್ಷ ಲಕ್ಷ ಓಟದೊಂದಿಗೆ ಮನಸ್ಸು ಸಾಗುತ್ತದೆಂದರು. ಪಂಚಜ್ಞಾನೇಂದ್ರೀಯಗಳೂ ಬಹಳೇ ವೇಗದಿಂದ ಚಲಿಸುತ್ತವೆ ಅವುಗಳನ್ನು ತಡೆಯುವುದು ಅಸಾಧ್ಯವೆಂದರು. ಅರಿತುಕೊಂಡ ಮನಸ್ಸಿನ ಮಧ್ಯದಲ್ಲಿ ಸಿಕ್ಕಕೊಂಡಿರತ್ತಕ್ಕಂತಹ ಜನಮನಸ್ಸಿನ ಕೈಯಲ್ಲಿ ಸಿಕ್ಕೊಂಡಿದೆ ಎಂದರು. ತಿರುಗಲೂಮಡುವಿನಲ್ಲಿ ಏನೇ ಸಿಕ್ಕರೂ ನುಗ್ಗಾಗಿ ಬರುತ್ತದೆ ಹಾಗೆ ಮನಸ್ಸೆಂಬುದು ತಿರುಗಲೂಮಡುವಿದ್ದಂತೆ. ಪ್ರಪಂಚದ ಪ್ರಪಾತದೊಳಗೆ ಸಿಲುಕಿ ಏಳಲಾರದಂತೆ ಮಾಡುತ್ತದೆ ಮನಸ್ಸೆಂದರು.
ಜನ್ಮ ಜನ್ಮಾಂತರದಿಂದ ಬಂದಂತಹ ಲೋಕದ ಪ್ರಪಂಚ, ಸಂಸಾರ ಪ್ರಪಂಚ ಇರಬಾರದಂತಲ್ಲ ಆ ಸೆಳವಿಗೆ ಹೋಗಿ ಬಿಳಲಾರದಂತೆ ಹೊರಗಲಿದ್ದೆ ನೀರು ಕುಡಿದರೆ ಅದಕ್ಕೆ ನಿಷಪ್ರಪಂಚವೆಂದು ಶರಣರು ಅನ್ನುತ್ತಾರೆಂದರು. ಮನಸ್ಸಿನ ಸೆಳುವೆನ್ನುವುದು ನಿಶಾಶ್ವತ ಶಾಶ್ವತವೆಂದು ತಿಳಿದು ಒಳಗೆ ಹೋದರೆ ಹೊರಗೆ ಬರುವುದೇಇಲ್ಲವೆಂದರು. ಮನುಷ್ಯನಿಗೆ ಪ್ರಜ್ಞೆ ಉಂಟಾದಾಗ ಆತ ಸಮಾಧಾನವಾಗಿ ನಗುನಗುತ್ತ ಇರುತ್ತಾನೆ ಆನಂದವಾಗಿರುತ್ತಾನೆಂದರು. ಪ್ರಸಾದ ಅನ್ನುವುದು ಊಟದಲ್ಲಿಲ್ಲ. ಪದಾರ್ಥ ದೇಹಕ್ಕಾಗಿ ಹಾಗೂ ಆತ್ಮ ತೃಪ್ತಿಗಾಗಿ ಇದೆ. ಪ್ರಸನ್ನತೆ ಎಂಬುದು ಪ್ರಸಾದವಾಗಿ ಮಾರ್ಪಡುತ್ತದೆ ಎಂದರು. ಪ್ರಪಂಚ ಅಂದರೇ ಅದರೊಳಗಿದೆ ಹೊಲಸ ಅದರ ಹೊರಗಿದೆ ಸ್ವಚ್ಚತೆ ಎಂದರು. ವಿಧಿವಶವಾದ ಮನಸ್ಸನ್ನು ಭಗವಂತನ ವಶಕ್ಕೆ ಒಪ್ಪಿಸಬೇಕು ಸುಖ, ಬೋಗ, ವೈರಾಗ್ಯ ಇಲ್ಲದ್ದು ಶೂನ್ಯವಾಗಿರುತ್ತದೆ ಎಂದರು. ಮನೆಯಲ್ಲಿ ಏನೇ ಇರಲಿ ಅದು ನಂದಲ್ಲ ಅನ್ನುವುದನ್ನು ಕಲೆಯಬೇಕು ಯಾಕೆಂದರೇ ಅದನ್ನು ತಗೆದುಕೊಂಡು ಹೋಗುವುದಿಲ್ಲ ಇದಕ್ಕೆ ಶರಣರು ಆತ್ಮಸಂಪದವೆಂದ್ದಿದ್ದಾರೆಂದರು.
ಅಲ್ಲಮಪ್ರಭು ದೇವರು ಸಿದ್ದರಾಮನನ್ನು ಕರೆದುಕೊಂಡು ಸೊಲ್ಲಾಪುರದಿಂದ ಕಲ್ಯಾಣಕ್ಕೆ ಪ್ರಯಾಣ ಬೆಳೆಸುತ್ತಾರೆ. ಕಲ್ಯಾಣಕ್ಕೆ ಹೋದ ಅಲ್ಲಮಪ್ರಭು ದೇವರು ಹಾಗೂ ಸಿದ್ದರಾಮರೂ ಬಸಣ್ಣನವರನ್ನು ಬೆಟ್ಟಿಯಾಗಲೂ ಮುಂದಾದಾಗ ಬಸವಣ್ಣನವರು ಲಿಂಗ ಪೂಜೆಗೆ ಕುಳಿತು ಆಗಮಿಸುತ್ತಿರುವ ಅಲ್ಲಮಪ್ರಭುದೇವರನ್ನು ಮರೆತು ಪೂಜೆಯನ್ನು ಮುಂದುವರೆಸಿದ್ದರಿಂದ ಅಲ್ಲಮಪ್ರಭುಗಳು ಸಿಟ್ಟಿಗೆದ್ದಾಗ ಬಸವಣ್ಣನವರ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರು ಅಲ್ಲಮ ಶ್ರೀಗಳ ಆಗಮನದ ಸುದ್ದಿತಿಳಿಸಲು ಲಿಂಗಪೂಜೆಗೆ ಕುಳಿತ ಬಸವಣ್ಣನ ಹತ್ತಿರ ಬಂದು ಪೂಜೆಗೆ ಭಂಗಬರದಂತೆ ಸೂಕ್ಷ್ಮವಾಗಿ ತಿಳಿಹೇಳಿದ ಅಪ್ಪಣ್ಣನವರು ತಾನಾಗಿ ಸಂಪತ್ತೆಂಬುದು ಮನೆಗೆ ಬಂದಿದೆ ಪರಿಮಳದಂತೆ ವಾಸನೇ ಬೀರುತ್ತಾ ಮನೆಗೆ ಬಂದಿದೆ ಎಂದು ವಚನ ಮೂಲಕ ಹೇಳಿದಾಗ ಆವಾಗÀ ಬಸವಣ್ಣನವರು ಬರ್ಹಿಮೂಖವಾಗಿ ಕೂಡಲೇ ಅಲ್ಲಮಪ್ರಭುವಿನ ಹತ್ತಿರ ಬರುತ್ತಾರೆ. ಬಸವಣ್ಣನವರು ಕೂಡಲೇ ಅಲ್ಲಮಪ್ರಭುವನ್ನು ಕರೆದುಕೊಂಡು 1ಲಕ್ಷ 96ಸಾವಿರ ಗಣಂಗಳೊಂದಿಗೆ ಪ್ರಸಾದಕ್ಕೆ ಆಹ್ವಾನಿಸುತ್ತಾರೆ. ಆವಾಗ ಅಲ್ಲಮಪ್ರಭುವಿಗೆ ಪ್ರಸಾದ ಹಾಕಿಕೊಟ್ಟ ತಾಟು ಭೂಮಂಡಲದಂತಾಗಿ ಪರಿವರ್ತನೆಗೊಂಡು ಎಲ್ಲ ಗಣಂಗಳು ಸೇವಿಸುವಂತಹ ಮಹಾಪ್ರಸಾದ ಅಲ್ಲಮರ ಪವಾಡ ದೃಶ್ಯದಿಂದ ಎಲ್ಲವೂ ಮಾಯವಾಗಿ ಹೋಗುತ್ತದೆ. ಆದರೂ ಅಲ್ಲಮ ಇನ್ನೂ ನನ್ನ ಹೊಟ್ಟೆ ತುಂಬಿಲ್ಲ ಎಂದಾಗ ಅರಮನೆಗೆ ಓಡಿಹೋಗಿ ನಡೆದ ಘಟನೆಕುರಿತು ಬಸವಣ್ಣರಿಗೆ ತಿಳಿಸಿ ಅಲ್ಲಮಪ್ರಭುವಿನ ಹೊಟ್ಟೆ ಇನ್ನೂ ತುಂಬಿಲ್ಲವೆಂದಾಗ ಆವಾಗ ಬಸವಣ್ಣನವರಿಗೆ ಅರಿವಾಗಿ ಇವರು ಸಾಮಾನ್ಯರಲ್ಲ ಬಸವಣ್ಣನವರು ಆಸ್ಥಾನಕ್ಕೆ ಬಂದು ತನು ಮನ ಪ್ರಾಣ, ತಲೆ, ಕಣ್ಣನ್ನು ಅರ್ಪಣೆ ವಿಚಾರವನ್ನು ಅಲ್ಲಮರಿಗೆ ತಿಳಿಸಿದಾಗ ಅಲ್ಲಮರು ಶಾಂತರಾಗುತ್ತಾರಲ್ಲದೆ ಅಗುಳು ಸೇವಿಸಿದ ಪ್ರಸಾಧ ಆವಾಗ ಅಲ್ಲಮರ ಹೊಟ್ಟೆ ತುಂಬುತ್ತದೆ ಆವಾಗ ಅಲ್ಲಮ ಶಾಂತವಾಗುತ್ತಾನೆ. ಮಾಯವಾಗಿ ಹೋಗಿದ್ದ ಪ್ರಸಾದ ಇದ್ದಕ್ಕಿಂದಂತೆ ಮೊದಲಿನಂತಾಗುತ್ತದೆ. ಇದನ್ನೆಲ್ಲ ಅರಿತುಕೊಂಡ ಬಸವಣ್ಣನವರು ಅಲ್ಲಮರ ಪಾದಪೂಜೆ ಗೈಯುತ್ತಾರೆ.
ಅನುಭವ ಮಂಟಪದಲ್ಲಿ ಸಿದ್ದರಾಮನಿಗೆ ಲಿಂಗದೀಕ್ಷೆ ಕೊಡಬೇಕೆನ್ನುವ ಚೆನ್ನಬಸವಣ್ಣನವರಿಂದ ಗುರು ಉಪದೇಶವಾಗುತ್ತದೆ. ಆವಾಗ ಸಿದ್ದರಾಮ ಹೇಳುತ್ತಾನೆ ಘನವೆಂಬ ವಿಶ್ವರೂಪವಾದಂತಹ ಶ್ರೀ ಚೆನ್ನಬಸವಣ್ಣನವರ ಬಗ್ಗೆ ವರ್ಣನೆ ಮಾಡಲಾಗದು ಎನ್ನುತ್ತಾನೆ. ಸಿದ್ದರಾಮ ಸೊಲ್ಲಾಪೂರಕ್ಕೆ ತೆರಳುತ್ತಾನೆ. ಅಲ್ಲಮಶೀವಯೋಗಿ ಮಂಟಪದಲ್ಲಿ ಕೂಳಿತು ಹಮ್ಮುಬಿಮ್ಮು ಇಲ್ಲದಂತೆ ಪರಮಾತ್ಮನ ತತ್ವಕ್ಕೆ ಬಂದನಾನು ಇದು ನಂದಲ್ಲವೆಂದ ಅಲ್ಲಮ. ಮುಂದೆ ಅಲ್ಲಮ ಹಾಗೂ ಅಕ್ಕಮಹಾದೇವಿ ಅಲ್ಲಮರ ಮಂಟಪ ಬಿಟ್ಟು ಶ್ರೀಶೈಲಕ್ಕೆ ತೆರಳುತ್ತಾರೆ. ಕೊನೆಗೆ ಏನೂ ಉಳಿಯುವುದಿಲ್ಲ ಒಂದು ದಿನ ಮರೆಯಾಗುತ್ತದೆ ಎಂಬುದನ್ನು ಪ್ರವಚನಕಾರ ಮಲ್ಲಿಕಾರ್ಜುನ ಶ್ರೀಗಳು ತಿಳಿಹೇಳಿದರಲ್ಲದೆ ಬಿಜ್ಜಳರಾಜನ ಕತೆಯನ್ನು ಹೇಳಿ ಕೊಂಡಿ ಮಂಚಣ್ಣನೆಂಬವ ಬಸವಣ್ಣನವರ ಮೇಲೆ ಮಾಡುತ್ತಿರುವ ಆರೋಪ ಕುರಿತು ಬಿಜ್ಜಳರಾಜ ಪರೀಕ್ಷೆಗೆ ಒಳಪಟ್ಟು ಬಸವಣ್ಣನವರು ದೇವತಾ ಸ್ವರೂಪಿ ಎಂಬುದನ್ನು ಅರ್ಥೈಸಿಕೊಂಡಿದ್ದರ ಕುರಿತು ಬಸವಣ್ಣನವರ ಪ್ರಾಮಾಣಿಕ ಸೇವೆ ನಡೆನುಡಿಗೆ ತಲೆಬಾಗಿಸಿದ ಬಿಜ್ಜಳ ರಾಜನ ಕತೆಯನ್ನು ಹೇಳಿದರಲ್ಲದೇ ಬಸವಣ್ಣನವರಿಗೆ ಇಬ್ಬರೂ ಪತ್ನಿಯರಿದ್ದರು ಹೋರನೋಟಕ್ಕೆ ಸತಿಪತಿ ಎನಿಸಿಕೊಂಡಿದ್ದರಲ್ಲದೆ ಒಳನೋಟಕ್ಕೆ ಗುರುಶಿಶ್ಯರೆನಿಸಿ ಕೊಂಡು ನಡೆದ ಸ್ಥಿತಿಗತಿ ಕುರಿತು ಹಾಗೂ ಬಸವಣ್ಣನವರಿಂದ ಜರುಗಿದ ಕೆಲವು ಪವಾಡಗಳ ಕುರಿತು ಪ್ರವಚನಕಾರ ಶ್ರೀಗಳು ಬಹು ಮಾರ್ಮಿಕವಾಗಿ ನೆರೆದ ಭಕ್ತಸಮೂಹಕ್ಕೆ ವಿವರಿಸಿದರು.ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಆರ್ಶಿವಚನ ವಿಯುತ್ತಾ ಮನುಷ್ಯನಿಗೆ ಸುಖಜೀವನ ನಡೆಸಲು ಆಸ್ತಿ ಅಂತಸ್ತು ಬೆಳ್ಳಿ ಬಂಗಾರ ಬೇಕಾಗಿಲ್ಲ ಇವು ಯಾವವೂ ಶಾಶ್ವತವಲ್ಲ ಬಂದದ್ದು ಕಾಲಿಕೈ, ಹೋಗುವುದು ಕಾಲಿಕೈ ಆದರೆ ಸುಖಜೀವನ ನಡೆಸಲೂ ತೃಪ್ತಿಪಡುವಸ್ಟು ಅನ್ನ ನೀರು ದೊರಕಿಸಿ ಕೊಂಡರೇ ಅದರಂತ ಸುಖ ಜೀವ ಮತ್ತಾವುದರಲ್ಲಿ ಸಿಗಲಾರದೆಂದು ಹೇಳಿದ ಶ್ರೀಗಳು ಗಳಿಸಿರುವ ಪ್ರೀತಿ ಹಿಂದೆ ಬರುತ್ತದೆ. ಜಗತ್ತಿನಲ್ಲಿ ನಿಜವಾದ ಸಂಪತ್ತು ಎಂದರೇ ಪ್ರೀತಿ ಎಂದರು.
ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ,ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಮಾಲಿಪಾಟೀಲ (ಕರಿಬಾವಿ), ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ,ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.