ಕಾಯಕದಿಂದಲೇ ಜಾತಿಯ ಹುಟ್ಟು ವಿನಃ ಬೇರೇನೂ ಇಲ್ಲ ಎಲ್ಲರ ಮೂಲ ಒಂದೇ: ಮಹಾಲಿಂಗ ದೇವರು

ಭಾಲ್ಕಿ: ಮಾ.18: 62ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ಸುವರ್ಣ ಓಂಕಾರ ಬಲ್ಲೂರು ಅವರ ಮನೆಯಲ್ಲಿ ನೆರವೇರಿತು. ಪೂಜ್ಯಶ್ರೀ ಮಹಾಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಾತಿಗಳು ಹೇಗೆ ಹುಟ್ಟಿಕೊಂಡವು ಎಂಬುದರ ಬಗ್ಗೆ ತಿಳಿಸಿದರು. ಹೆಣ್ಣು ಇಲ್ಲದೆ ಜಗವೇ ಇಲ್ಲ. ಹೆಣ್ಣು ಮಾಡದ ಕಾಯಕವೇ ಇಲ್ಲ. ಮನೆಯ ಒಳಗೂ ಹೊರಗೂ ದಿನದ 24ಕ್ಕೂ ಗಂಟೆಯೂ ಸಹ, ಯಾವುದೇ ಒಂದು ಕಾಯಕ ಆ ಹೆಣ್ಣು ಮಕ್ಕಳು ಒಂದು ದಿನ ಬಿಟ್ಟರೆ ಇಡೀ ಜಗವೇ ನಿಂತು ಬಿಡುತ್ತದೆ, ಅಸ್ತವ್ಯಸ್ತವಾಗುತ್ತದೆ. ಅಂತಹ ದೊಡ್ಡ ನಿಸ್ವಾರ್ಥ ಕಾಯಕ ಮಾತೆಯರದ್ದು. ಹಿಂದೆಯಿಂದಲೂ ಹೆಣ್ಣು ಮಕ್ಕಳು ಗಂಡಿನ ಜೊತೆ ಜೊತೆಗೆ ಮನೆ ನೋಡಿಕೊಳ್ಳುವುದರ ಜೊತೆಗೆ ಗಂಡನ ಕಾಯಕಕ್ಕೆ ಕೈ ಜೋಡಿಸುತ್ತಿದ್ದರು. ಕಂಬಾರರ ಹೆಂಡತಿ ಮಣ್ಣು ಹದ ಮಾಡುವುದು, ಅಗಸನ ಹೆಂಡತಿ ಬಟ್ಟೆ ತೊಳೆಯುವುದು, ಹೂಗಾರನ ಹೆಂಡತಿ ಹೂ ಕಟ್ಟುವ ಕಾರ್ಯ, ಹೀಗೆ ಗಂಡು ಹೆಣ್ಣು ಇಬ್ಬರೂ ಸೇರಿ ಕಾಯಕ ಮಾಡುತ್ತಿದ್ದರು. ಈ ಮೂಲಕ ಜಗತ್ತಿನಲ್ಲಿ ಕಾಯಕದಿಂದ ಜಾತಿಗಳು ಹುಟ್ಟಿದವು. ಮೂಲ ಜಾತಿ ಯಾವುದು ಇಲ್ಲ. ಎಲ್ಲರೂ ಒಂದೇ. ಜಾತಿ ಕುಲ ಏನೂ ಇಲ್ಲ ಎಲ್ಲವೂ ಮನುಷ್ಯ ಜಾತಿ.
ಮನುಷ್ಯ ಆವಿಷ್ಕಾರ ಅನ್ವೇಷಣೆಗಳನ್ನು ಮಾಡಿ ಅದರ ಪ್ರಭಾವದಿಂದ ಬದುಕಿಗಾಗಿ ಒಳ್ಳೆಯ ಸಮೃದ್ಧ ಜೀವನ ನಡೆಸಲು ಒಂದು ಕಾಯಕ ಮಾಡಲು ಆರಂಭಿಸಿದ. ಎಲ್ಲರೂ ಒಂದೇ ಕಾಯಕ ಮಾಡಲಿಲ್ಲ ಅವರ ಬದುಕಿನಲ್ಲಿ ಬೇಕಾಗುವ ಅಂಶಗಳನ್ನು ಇಟ್ಟುಕೊಂಡು ಕಾಯಕ ಆರಂಭಿಸಿದರು. ಅದೇ ರೀತಿ ಮುಂದೆ ಪೀಳಿಗೆ ನಡೆಸಲು ಮದುವೆ ಮಾಡಿಕೊಳ್ಳ ಬೇಕಾಗಿತ್ತು. ಹೇಗೆ ಯಾರನ್ನು ಮದುವೆಯಾಗಬೇಕು ಎಂದು ಯೋಚಿಸಿದಾಗ ಕುಂಬಾರ ಕುಂಬಾರಿಕೆ ಮಾಡುವವನ ಮಗಳನ್ನು ಮದುವೆಯಾದ ಯಾಕೆಂದರೆ ಬಡಿಗೆ ಕೆಲಸ ಮಾಡುವವನ ಮಗಳಿಗೆ ಕುಂಬಾರಿಕೆ ಬಗ್ಗೆ ತಿಳಿಯದು ಆಕೆಗೆ ಗೊತ್ತಿರುವುದು ಬರಿ ಬಡಿಗತನ. ಹೂಗಾರನ ಮಗಳಿಗೆ ಗೊತ್ತಿರುವುದು ಹೂ ಕಟ್ಟುವುದು ಕಮ್ಮಾರಿಕೆಯಲ್ಲ. ಅದಕ್ಕೆ ಯಾವ ಕೆಲಸ ಗಂಡು ಮಾಡುತ್ತಿದ್ದನೋ ಅದೇ ಕಾಯಕದ ಮನೆಯ ಹೆಣ್ಣು ಹುಡುಕುವ ಪದ್ಧತಿ ಶುರುವಾಯಿತು. ಯಾವುದೋ ಗ್ರಾಮಕ್ಕೆ ಭೇಟಿ ಮಾಡಿ ಅಲ್ಲಿನ ಮಗುವನ್ನು ಮದುವೆ ಮಾಡಿಕೊಂಡು ತಂದು ಹೆಂಡತಿ ಮನೆಯಲ್ಲಿ ಗಂಡ ಅದೇ ಕೆಲಸ ಹೊರಗಡೆ ಮಾಡುತ್ತಾ ಜೀವನ ನಡೆಸುತ್ತಿದ್ದರು. ಹೂಗಾರನ ಹೆಂಡತಿ ಹೂ ಕಟ್ಟುವುದು ಆತ ಹೊರಗಡೆ ಮಾರಿಕೊಂಡು ಬರುವುದು, ಕಮ್ಮಾರನ ಹೆಂಡತಿ ಕಾಸುವುದು ಆತ ಅದನ್ನು ಮಾರುವುದು, ಹೀಗೆ ಶುರುವಾಗಿದ್ದೇ ಕಾಯಕ. ಅವರವರ ಉಪಜೀವನಕ್ಕೆ ಅದೇ ಕಾಯಕ ಮಾಡುವವರನ್ನು ಹುಡುಕಿ ಮದುವೆಯಾಗುತ್ತಿದ್ದರು. ಈ ಮೂಲಕ ಜನಾಂಗ ಬೆಳೆಯುತ್ತಾ ಹೋಯಿತು. ಹೀಗೆ ಈ ಪದ್ಧತಿ ಬೆಳೆಯುತ್ತಾ ಹೋಯಿತು. ಮುಂದೆ ಒಂದು ದಿನ ಕಾಯಕ ಆಡುವವರ ಬಾಯಿಯಲ್ಲಿ ಜಾತಿಯಾಗಿ ಹೋಯಿತು. ಇವರು ಈ ಕೆಲಸ ಮಾಡುವವರು ಎನ್ನುವುದು ಹೋಗಿ ಇವರು ಈ ಜಾತಿಗೆ ಸೇರಿದವರು ಅವರು ಆ ಜಾತಿಗೆ ಸೇರಿದವರು ಎಂದು ಸಂಭೋದಿಸಲು ಶುರುವಾಯಿತು.
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ? ಇದು ಕಾರಣ, ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು!. ಎನ್ನುವ ಮೂಲಕ ಬಸವಣ್ಣನವರು ಜಾತೀಯತೆ ಹೀಗೆ ಹುಟ್ಟಿದ್ದೇ ವಿನಃ ಬೇರೇನೂ ಇಲ್ಲ. ಎಲ್ಲವೂ ಕಾಯಕವೇ ಯಾವ ಕಾಯಕವು ಹೆಚ್ಚಲ್ಲ ಕಡಿಮೆಯಲ್ಲ ಕಾಯಕದಿಂದಲೇ ಜಾತಿಯ ಹುಟ್ಟು ವಿನಃ ಬೇರೇನೂ ಇಲ್ಲ ಎಲ್ಲರೂ ಒಂದೇ ಎಂದು ಹೇಳಿದರು.
ಬಸವ ಪ್ರಾರ್ಥನೆಯನ್ನು ಅರುಣಾ ಹಾಗೂ ಕರುಣಾ ನಡೆಸಿಕೊಟ್ಟರು. ಸಾವಿತ್ರಿ ಧನರಾಜ್ ಪಾಟೀಲ್ ಅವರು ಅನುಭಾವ ಹೇಳಿದರು. 12ನೇ ಶತಮಾನದ ಶರಣೀಯರ ಕಾಯಕದ ಕುರಿತು ಮಾತನಾಡಿದರು. ಕರುಣಾ ಕಾರಬಾರಿ ಭಕ್ತಿಗೀತೆಯನ್ನು ಹಾಡಿದರು. ಬಸವರಾಜ ಮರೆ ಕಾರ್ಯಕ್ರಮ ನಿರೂಪಿಸಿದರು ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಎಲ್ಲರನ್ನು ಗೌರವಿಸಲಾಯಿತು. ಜೈಪ್ರಕಾಶ ಕುಂಬಾರ್, ವೈಜಿನಾಥ್ ಕುಂಬಾರ್, ಪ್ರಭಾವತಿ ಮರೆ, ಯವ್ವಮ್ಮ ಹುಲಸೂರೆ, ಶಾಂತಮ್ಮ ಬಿರಾದಾರ, ಶೋಭಾ ಹೌಶೆಟ್ಟಿ, ಗಂಗಮ್ಮ, ಮಂಗಲಾ, ಶಾಲಮ್ಮ, ತೀರ್ಥಮ್ಮ, ನೀಲಮ್ಮ, ಸ್ವೀಟಿ, ಈಶ್ವರಮ್ಮ, ಬಸಮ್ಮ, ರಾಣಿ ಆರ್ ಪಾಟೀಲ್ ಉಮಾದೇವಿ ಸವಳೆ, ಸುಶೀಲಾಬಾಯಿ, ಸರೋಜನ ಬಸವರಾಜ, ಸಂಗೀತಾ, ಇಂದುಮತಿ, ಶ್ರೀದೇವಿ, ಉಮಾದೇವಿ ಮಧುರಗೆ, ಈರಮ್ಮ, ಶಾಂತಮ್ಮ ಶಿರಗಾಪುರೆ, ಸುನೀತಾ ಲದ್ದೆ, ಮಮತಾ, ಮಲ್ಲಿಕಾರ್ಜುನ ಪವಡಶೆಟ್ಟಿ ಹೀಗೆ ಅನೇಕರು ಉಪಸ್ಥಿತರಿದ್ದರು. ಮಳೆಯ ನಡುವೆಯೂ ಕಾರ್ಯಕ್ರಮ ಬಹಳ ಚೆನ್ನಾಗಿ ನೆರವೇರಿತು. ಅನುಪಮಂಟಪದಲ್ಲಿ ಹೇಗೆ ಚರ್ಚೆ ನಡೆಯುತಿತ್ತೋ ಅದೇ ರೀತಿಯಲ್ಲಿ ಬಹಳ ಚೆನ್ನಾಗಿ ಚರ್ಚೆ ನಡೆಯಿತು ಮಂಗಲ ಹಾಗೂ ಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.