ಕಾಯಕಜೀವಿ ಬೀದಿಬದಿ ವ್ಯಾಪಾರಿಗಳಿಂದ ಬಸವ ಜಯಂತಿ

ಕಲಬುರಗಿ,ಏ.11- ಶ್ರಮಿಕ ವರ್ಗದ ಆದರ್ಶ ಪುರುಷ ವಿಶ್ವಗುರು ಬಸವೇಶ್ವರರು, ಕಾಯಕದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡಿದವರು ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಕಾರ್ಯಾಯಲದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತೋತ್ಸವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶರಣರ ತತ್ವಾದರ್ಶಗಳು ಬದುಕಿಗೆ ದಾರಿದೀಪ ಆಗಿವೆ ಎಂದರು.
ಕಾಯಕ ಜೀವಿಗಳಾದ ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ನಂಬಿಕೆ ವಿಶ್ವಾಸದ ಮೂಲಕ ಗ್ರಾಹಕರಿಗೆ ಸೇವೆಮಾಡುವ ಈ ಶ್ರಮಿಕ ವರ್ಗಕ್ಕೆ ಸರ್ಕಾರದ ನೆರವಿನ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಗುರುರಾಜ ತಿಳಗೊಳ ಹೇಳಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಪಾಟೀಲ, ಚಂದ್ರಹಾಸ ಜಿದ್ರಿ, ವೆಂಕಟೇಶ, ರೋಹಿತ, ಪದ್ಮರಾಜ ಸೂರ್ಯವಂಶಿ, ರಾಘವೇಂದ್ರ ರಾಮದಾಸಿ, ಶೇಖ ಬಾಬು ಪರಿಟ್ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.