ಕಾಮ್ರೇಡ್ ಶಂಕರ್‌ಸಹಾರಿಗೆ ಶ್ರದ್ಧಾಂಜಲಿ

ದಾವಣಗೆರೆ. ಮೇ.೩೧; ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರು ಹಾಗೂ ಎಸ್.ಯು.ಸಿ.ಐ (ಸಿ) ಪಕ್ಷದ ಕೇಂದ್ರ ಸಮಿತಿಯ ಪಾಲಿಟ್ ಬ್ಯೂರೋ ಸದಸ್ಯರು ಮತ್ತು  ಅಖಿಲ ಭಾರತ ಕಾರ್ಮಿಕ ಚಳುವಳಿಗಳ ಪ್ರಭಾವಿ ನಾಯಕರಾಗಿದ್ದ ಕಾಮ್ರೇಡ್ ಶಂಕರ ಸಹಾ ನಿಧನಕ್ಕೆ ದಾವಣಗೆರೆ ಜಿಲ್ಲಾ ಕಾರ್ಮಿಕ ಸಂಘಟನೆಗಳು ಸಂತಾಪ ಸೂಚಿಸಿವೆ.  ಕೋವಿಡ್ ಸೇರಿದಂತೆ ಕಿಡ್ನಿ ಮತ್ತಿತರ ಕಾಯಿಲೆ ಗಳಿಗೆ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಇವುಗಳ ವಿರುದ್ಧ ಸುಧೀರ್ಘ ಹೋರಾಟ ನಡೆಸಿದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.  ರಾಜ್ಯ ಸಮಿತಿಯಯು ಅಗಲಿದ ನಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿಕೆ. ಸೋಮಶೇಖರ್ ಯಾದಗಿರಿ ಹೇಳಿದರು.