ಕಾಮೆಡ್ ಕೆ ಫಲಿತಾಂಶ ಪ್ರಕಟ ಗೋಪಿ ಕೃಷ್ಣಗೆ ಮೊದಲ ರ್‍ಯಾಂಕ್

ಬೆಂಗಳೂರು, ಜೂ.೧೦- ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಲಾದ ಕಾಮೆಡ್-ಕೆ ಯುಜಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಬೆಂಗಳೂರಿನ ಎನ್. ನಂದ ಗೋಪಿ ಕೃಷ್ಣ ಈ ಪರೀಕ್ಷೆಯಲ್ಲಿ ಮೊದಲನೇ ರ್‍ಯಾಂಕ್ ಪಡೆದಿದ್ದಾರೆ.ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು ೨೦೨೩ರ ಕಾಮೆಡ್ ಕೆ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ೮೧೩೦ ವಿದ್ಯಾರ್ಥಿಗಳು ಶೇ.೯೦ ರಿಂದ ಶೇ.೧೦೦ ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಅದೇ ರೀತಿ ೭,೭೧೯ ವಿದ್ಯಾರ್ಥಿಗಳು ಶೇ.೮೦ ರಿಂದ ಶೇ.೯೦ ರಷ್ಟು ಅಂಕ ಗಳಿಸಿದ್ದಾರೆ.೮೦೩೬ ವಿದ್ಯಾರ್ಥಿಗಳು ಶೇ.೭೦ ರಿಂದ ಶೇ.೮೦ ರಷ್ಟು ಅಂಕ ಗಳಿಸಿದ್ದಾರೆ.ಮೊದಲ ೧೦ ಸ್ಥಾನಗಳ ಪೈಕಿ ನಾಲ್ವರು ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಮೊದಲ ೧೦೦ ಸ್ಥಾನಗಳ ಪೈಕಿ ೫೩ ವಿದ್ಯಾರ್ಥಿಗಳು ರಾಜ್ಯದವರೇ ಆಗಿದ್ದಾರೆ.
ಈ ಪ್ರವೇಶ ಪರೀಕ್ಷೆಯನ್ನು ೨೦೨೩ರ ಮೇ ೨೮ರಂದು ನಡೆಸಲಾಗಿತ್ತು. ಭಾರತದಲ್ಲಿ ೧೭೯ ನಗರಗಳಲ್ಲಿ ೨೬೪ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಶೇ.೮೦.೯೪ ವಿದ್ಯಾರ್ಥಿಗಳು ಹಾಜರಾಗಿದ್ದರು.ಇನ್ನೂ, ಬೆಂಗಳೂರಿನ ೩೮ ಕೇಂದ್ರಗಳು ಸೇರಿ ಒಟ್ಟು ೮೦ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು ಶೇ.೮೮.೭೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಅದರಲ್ಲೂ, ಕಾಮೆಡ್-ಕೆಗೆ ನೋಂದಾಯಿಸಿದ್ದ ೯೬,೬೦೭ ವಿದ್ಯಾರ್ಥಿಗಳ ಪೈಕಿ ೭೮,೨೫೦ ವಿದ್ಯಾರ್ಥಿಗಳು ಹಾಜರಾದರಡ, ಕರ್ನಾಟಕದಲ್ಲಿ ೨೮,೭೧೧ ವಿದ್ಯಾರ್ಥಿಗಳು ನೋಂದಾಯಿಸಿದ್ದು, ೨೫,೪೮೭ ವಿದ್ಯಾರ್ಥಿಗಳು ಹಾಜರಾಗಿದ್ದರು.ಸದ್ಯ ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ.
ಕಾಮೆಡ್ ಕೆ ಫಲಿತಾಂಶ ನೋಡುವುದು ಹೇಗೆ
ಅಭ್ಯರ್ಥಿಗಳು ಮುಂದಿನ ಹಂತಗಳನ್ನು ಅನುಸರಿಸುವ ಮೂಲಕ ಕಾಮೆಡ್ ಕೆ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಕಾಮೆಡ್ ಕೆನ ಅಧಿಕೃತ ಸೈಟ್ ಅomeಜಞ.oಡಿgಗೆ ಭೇಟಿ ನೀಡಿ. ಮುಖಪುಟದಲ್ಲಿ ಲಭ್ಯವಿರುವ ಅಔಒಇಆಏ ಫಲಿತಾಂಶ ೨೦೨೩ ಲಿಂಕ್ ಮೇಲೆ ಕ್ಲಿಕ್ ಮಾಡಿ. ಲಾಗಿನ್ ವಿವರಗಳನ್ನು ನಮೂದಿಸಿದರೆ, ನಿಮ್ಮ ಫಲಿತಾಂಶ ಪರದೆಯ ಪ್ರಕಟವಾಗುತ್ತದೆ
ಕಾಮೆಡ್ ಕೆ ಪರೀಕ್ಷೆಯ ೧೦ ಟಾಪರ್ಸ್

 • ಎನ್.ನಂದ ಗೋಪಿ ಕೃಷ್ಣ-(ಕರ್ನಾಟಕ)ಬೆಂಗಳೂರು
  *ಎಂ.ಅಗರ್ವಾಲ್-ಹರಿಯಾಣ
  *ಸಿದ್ದಾರ್ಥ್ ಪಾಮದಿ- (ಕರ್ನಾಟಕ)ಬೆಂಗಳೂರು
  *ಗುಡಿಪತಿ ಸಾಯಿ ರೇವಂತ್- ಆಂಧ್ರ ಪ್ರದೇಶ
  *ಎ.ಮ್ಯಾಥ್ಯೂ-ಕೇರಳ
  *ಪಿ.ಎಲ್.ದೇವೇಶ್-ಹರಿಯಾಣ
  *ಯುವರಾಜ ಸಿಂಗ್ ಆರ್.-ಕೇರಳ
  *ಶ್ರೇಯಾ ಪ್ರಸಾದ್-(ಕರ್ನಾಟಕ)ಮೈಸೂರು
  *ಅರುಣ್ ಬಿ.ಡಿ.-(ಕರ್ನಾಟಕ)ಬೆಂಗಳೂರು
  *ಮನೀಷ್ ಎಚ್.ಪಿ-(ಕರ್ನಾಟಕ)ಬೆಂಗಳೂರು