ಕಾಮುಕ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ರಾಯಚೂರು,ಮಾ.೩೧- ಹತ್ತನೇ ತರಗತಿ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಶಾಲಾ ಮುಖ್ಯ ಗುರುಗಳನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಶಕ್ತಿನಗರ ಗ್ರಾಮದಲ್ಲಿ ನಡೆದಿದೆ.
ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಿವೃತ್ತಿಯ ಅಂಚಿನಲ್ಲಿರುವ ಆರೋಪಿ ಪ್ರಾಂಶುಪಾಲರು ಸಂತ್ರಸ್ತೆಯ ಫೋನ್ ನಂಬರ್ ಪಡೆದು ವಿದ್ಯಾರ್ಥಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ತಿಳಿಸಿದರು. ಕಾಮುಕ ಶಿಕ್ಷಕ ವಿದ್ಯಾರ್ಥಿ ಮೊಬೈಲ್‌ಗೆ ಅಶ್ಲೀಲ ಸಂದೇಶಗಳು ಮತ್ತು ಅಸಭ್ಯ ಫಾರ್ವರ್ಡ್‌ಗಳನ್ನು ಕಳುಹಿಸಲು ಆರಂಭಿಸಿದ್ದಾರೆ.
ಸಂತ್ರಸ್ತೆಗೆ ಕರೆ ಮಾಡಿ ಅಶಭ್ಯ ವಿಷಯದ ಕುರಿತು ಚರ್ಚೆ ಮಾಡಲು ಆರಂಭಿಸಿದ್ದಾರೆ. ಕಾಮುಕ ಶಿಕ್ಷಕ ತನ್ನನ್ನು ಸರ್ ಎಂದು ಸಂಬೋಧಿಸದೆ ಬಾಯ್ ಫ್ರೆಂಡ್‌ನಂತೆ ಭಾವಿಸಬೇಕು ಎಂದು ಕೇಳಿದ್ದ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದಳು.
ತನ್ನ ನಿವಾಸದಲ್ಲಿ ತನ್ನೊಂದಿಗೆ ಸಮಯ ಕಳೆಯುವಂತೆ ಒತ್ತಾಯಿಸಿದ್ದು ಅಲ್ಲದೇ ವಿದ್ಯಾರ್ಥಿಗೆ ಅಶ್ಲೀಲ ಸಂದೇಶಗಳನ್ನು ಕಳುಸುತ್ತಿದ್ದನು ಎಂದು ದೂರು ಸಲ್ಲಿಸಲಾಗಿತ್ತು. ಆರೋಪಿ ಬಾಲಕಿಯನ್ನು ಡಾರ್ಲಿಂಗ್ ಎಂದು ಸಂಭೋದಿಸುತ್ತಿದ್ದ ವಿದ್ಯಾರ್ಥಿ ಸಹಕರಿಸದಿದ್ದರೆ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹೂಡಿದ್ದರು ಎಂದು ಪೊಲೀಸರು ತಿಳಿಸಿದರು.
ಕಾಮುಕ ಶಿಕ್ಷಕ ಚಿತ್ರಹಿಂಸೆಯ ಬಗ್ಗೆ ವಿದ್ಯಾರ್ಥಿನಿ ಪೋಷಕರ ಬಳಿ ಹೇಳಿಕೊಂಡ ನಂತರ ಪೋಷಕರು ಶಿಕ್ಷಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಕ್ಸೋ ಲೈಂಗಿಕ ಕಿರುಕುಳ, ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.