ಕಾಮಿಡಿ – ಸಸ್ಪೆನ್ಸ್ ಗೋವಿಂದ‌ ಗೋವಿಂದ

ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ “ಗೋವಿಂದ ಗೋವಿಂದ” ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಏ.16 ರಂದು ತೆರೆಗೆ ಬರಲಿದೆ.

ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ‌ ಆರ್ ಗರಣಿ ಬಂಡವಾಳ ಹಾಕಿರುವ ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ.

ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ  ರೂಪೇಶ್ ಶೆಟ್ಟಿ ,  ಕವಿತಾ ಗೌಡ ಹಾಗೂ ಭಾವನ‌ ಮೆನನ್ ನಟಿಸಿದ್ದಾರೆ.

ಚಿತ್ರದ ಆಡಿಯೋ ಬಿಡುಗಡೆಗೆ ಮಾಜಿ ಶಾಸಕ ಕೆ.ಎನ್ ರಾಜಣ್ಣ , ನಿರ್ದೇಶಕ ಲಿಂಗದೇವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ನಿರ್ಮಾಪಕರಲ್ಲೊಬ್ಬರಾದ ರವಿ ಗರಣಿ ಮಾತನಾಡಿ, ಇದು ಶುರುವಾಗಿದ್ದು ಆಕಸ್ಮಿಕ. ವಿಜಯ್ ಸೇತುಪತಿ ಸಿನಿಮಾ ಮಾಡುವ ಪ್ಲಾನ್ ಇತ್ತು. ಕೊನೆಗೆ ಕೊರೊನಾದಿಂದ ಎಲ್ಲವೂ ಬದಲಾಯಿತು,. ಆಗ ಶುರುವಾಗಿದ್ದೇ  ಸಿನಿಮಾ, ತುಂಬ ಅಚ್ಚುಕಟ್ಟಾಗಿ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ತಿಲಕ್,  ಪಕ್ಕಾ ಕೌಟುಂಬಿಕ ಸಿನಿಮಾ.. ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಒಟ್ಟು ಆರು ಹಾಡುಗಳೀವೆ. ಎರಡು ಬಿಟ್ ಸಾಂಗ್ ಗಳಿವೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯೂ ಪ್ರಮಾಣ ಪತ್ರ ಸಿಕ್ಕಿದೆ ಎಂದರು.

ನಟ ಸುಮಂತ್ ಶೈಲೇಂದ್ರ ಮಾತನಾಡಿ, ಸಿನಿಮಾ‌ ನಿರ್ಮಾಣ ಮಾಡಿಕೊಂಡು ಇರಬೇಕು ಎಂದುಕೊಂಡಿದ್ದೆ. ರವಿ ಗರಣಿ ಅವರು ನೀವೇ ನಟಿಸಿ ಎಂದರು. ನಟಿಸಿದ್ದೇನೆ ಪಕ್ಕಾ ಮನರಂಜನೆ ಅಂಶಗಳು ಚಿತ್ರದಲ್ಲಿವೆ.ಎಲ್ಲರ ಸಹಕಾರ ಬೆಂಬಲ‌ ಇರಲಿ ಎಂದರು.

ರೂಪೇಶ್ ಶೆಟ್ಟಿ  ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನಟಿ ಕವಿತಾ ಗೌಡ ಟೆನ್ಷನ್ ಫ್ರೀ ಆಗಿ ಸಿನಿಮಾ ಮಾಡಿದ್ದಾರಂತೆ. ಕಳೆದ ವರ್ಷವೇ ಸಿನಿಮಾ ರೆಡಿಯಾಗಿತ್ತು. ಇದೀಗ ಬಿಡುಗಡೆಗೆ ಬಂದಿದ್ದೇವೆ. ಅವಕಾಶ ನೀಡಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದ ಎಂದರು.

ಸಂಗೀತ ನಿರ್ದೇಶಕ ಹಿತನ್ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು.ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ.

ಉಳಿದಂತೆ ಚಿತ್ರದಲ್ಲಿ ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಗೋವಿಂದೇ ಗೌಡ, ಯಮುನ ಶ್ರೀನಿಧಿ ಮುಂತಾದವರಿದ್ದಾರೆ.