ಕಾಮಿಡಿಯಲ್ಲಿಯೂ ಪರಿಸರ ಕಾಳಜಿ

ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹದಿಂದ ಅನೇಕ ಮಂದಿ ಚಿತ್ರರಂಗದಲ್ಲಿ ಕನಸು ಕಟ್ಟಿಕೊಳ್ಳಬೇಕು ಎನ್ನುವ ಆಸೆ ಹೊತ್ತು ಮಾಯಾನಗರಿಗೆ ಆಗಮಿಸುತ್ತಿದ್ದಾರೆ.
ಆ ಸಾಲಿಗೆ ಚೇತನ್ ಜೋಡಿದಾರ್ ಮತ್ತು ತಂಡ ಸೇರ್ಪಡೆಯಾಗಿದೆ.
ಚಿತ್ರದ ಮುಹೂರ್ತ ಆಚರಿಸಿಕೊಂಡಿರುವ ಇನ್ನೂ ಹೆಸರಿಡ ಚಿತ್ರಕ್ಕೆ ಜನವರಿ ಮೊದಲ ವಾರದಲ್ಲಿ ಚಿತ್ರೀಕರಣ ನಡೆಯುವ ಎಲ್ಲಾ ಸಾದ್ಯತೆಗಳಿವೆ.
ತಮಿಳಿನ ನಿರ್ದೇಶಕ ಆರ್.ಗೋಪಿನಾಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಚೇತನ್ ಜೋಡಿದಾರ್, ಶ್ರೀನಿವಾಸ ನಾಯ್ಕ ಹಾಗೂ ನವೀನ್‍ಕುಮಾರ್ ಚಿತ್ರದ ನಾಯಕರು ಕಾಣಿಸಿಕೊಂಡಿದ್ದಾರೆ. ಜೋಡಿಯಾಗಿ ಭಾರತಿ, ಇಂದಿರಾ ಹಾಗೂ ಸೌಮ್ಯಶ್ರೀ ನಟಿಸಿದ್ದಾರೆ.
ಮೂವರು ಸ್ನೇಹಿತರು ಮಾಡುವ ಸಣ್ಣ ತಪ್ಪಿನಿಂದಾಗಿ, ತಾವು ಮಾಡದಿದ್ದ ಕೊಲೆಯ ಆರೋಪ ಹೊತ್ತು 14 ದಿನಗಳ ಕಾಲ ಪೋಲಿಸರ ವಶದಲ್ಲಿರಬೇಕಾಗುತ್ತದೆ. ಪೊಲೀಸ್ ಕಸ್ಟಡಿಯಿಂದ ಹೇಗೋ ತಪ್ಪಿಸಿಕೊಂಡು ಹೊರಬಂದು ಆ ಸ್ನೇಹಿತರು ನಿಜವಾದ ಕೊಲೆಗಾರರನ್ನು ಪತ್ತೆಹಚ್ಚಿ ಪೋಲೀಸರ ವಶಕ್ಕೆ ಒಪ್ಪಿಸುವ ಮೂಲಕ ಕೊಲೆ ಆರೋಪದಿಂದ ಮುಕ್ತರಾಗುತ್ತಾರೆ.
ಮರ್ಡರ್ ಮಿಸ್ಟ್ರಿ ಹಿನ್ನೆಲೆಯಾಗಿಟ್ಟುಕೊಂಡು ಹಾಸ್ಯದ ಮೂಲಕ ಪರಿಸರದ ಸಂರಕ್ಷಣೆಯ ಸಂದೇಶ ಹೇಳಲು ಚಿತ್ರತಂಡ ಪ್ರಯತ್ನಿಸಿದೆ. ಚೇತನ್‍ಕುಮಾರ್ ತಂದೆ ಎಂ.ಹೆಚ್. ಕೃಷ್ಣಮೂರ್ತಿ ಮಗನ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಜನವರಿಯಲ್ಲಿ ಶೂಟಿಂಗ್ ಆರಂಭಿಸಿ ಬೆಂಗಳೂರು ಸುತ್ತಮುತ್ತ 15ರಿಂದ 20 ದಿನಗಳಲ್ಲಿ ಚಿತ್ರೀಕರಿಸುವ ಯೋಜನೆಯಿದೆ, ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಾದ ಕಬ್ಬನ್ ಪಾರ್ಕ್. ಲಾಲ್‍ಬಾಗ್, ಬನ್ನೇರುಘಟ್ಟ ಪಾರ್ಕ್, ನಂದಿಬೆಟ್ಟ ಹೀಗೆ ಹಲವಾರು ಲೊಕೇಶನ್‍ ಚಿತ್ರದ ಹೈಲೈಟ್
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಚೇತನ್ ಜೋಡಿದಾರ್, ಮೊದಲಿನಿಂದಲೂ ನಾಯಕನಾಗುವ ಆಸೆ ಇತ್ತು ಆದರೆ ಯಾರೂ ಕೂಡ ಅವಕಾಶ ನೀಡಿರಲಿಲ್ಲ. ಕೊನೆಗೆ ಅಪ್ಪನ ಜೊತೆ ಗುತ್ತಿದಾರನ ಕೆಲಸ ಮಾಡಿದೆ.ಅದರಲ್ಲಿ ಉಳಿದ ಹಣವನ್ನು ಅಪ್ಪನ ಸಹಾಯದಿಂದ ಚಿತ್ರ ಮಾಡುತ್ತಿದ್ದೇನೆ. ಇದೊಂದು ಕಾಮಿಡಿ ಅಂಶಗಳಿರುವ ಚಿತ್ರ ಜೊತೆಗೆ ಸಾಮಾಜಿಕ ಸಂದೇಶವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.
ಹಾಗೆ ನೋಡಿದರೆ ಕೊರೋನಾಗೂ ಮುನ್ನ ಮಾಡಬೇಕಾಗಿತ್ತು.ಇದೀಗ ಸಂಪೂರ್ಣ ಕಥೆ ಬದಲಾಯಿಸಿ ಚಿತ್ರ ಮಾಡಲು ಮುಂದಾಗುತ್ತಿದ್ದೇವೆ ಎಂದು ವಿವರ ನೀಡಿದರು.
ಚಿತ್ರದ ಉಳಿದ ಕಲಾವಿದರು ತಮ್ಮ ತಮ್ಮ ಪಾತ್ರದ ಬಗ್ಗೆ  ಮಾಹಿತಿ ಹಂಚಿಕೊಂಡರು.
ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿರುವ ಇಂದಿರಾ ನವೀನ್ ಕುಮಾರ್ ತೆರೆಯ ಮೇಲೆ ಗಂಡ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಉದಯ್ ಸಂಗೀತ, ಶ್ರೀನಿವಾಸ ರೇವಣಕರ ಛಾಯಾಗ್ರಾಹಣ ಚಿತ್ರಕ್ಕಿದೆ