
ಕಲಬುರಗಿ:ಮೇ.5:”ಅಪರಾಧ ಮುಕ್ತ, ನ್ಯಾಯಯುತ, ಸಮಾನ, ಗೌರವಯುತ, ಸುರಕ್ಷಿತ ಮತ್ತು ಸುಭದ್ರ ಸಮಾಜವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ” ಎಂದು ಕಲಬುರಗಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದಾರಾಧ್ಯ ಎಚ್.ಜೆ ಹೇಳಿದರು.
ಅವರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಂಕುರ-2023 ಕ್ರೀಡಾ, ಸಾಂಸ್ಕøತಿಕ ಮತ್ತು ನಾವೀನ್ಯತೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ನಮಗೆ ಸಾಮಾನ್ಯ ಜ್ಞಾನ ಇರಬೇಕು. ಕಾಮನ್ ಸೆನ್ಸ್ ಇರುವವರು ತಪ್ಪು ಕೆಲಸ ಮಾಡುವುದಿಲ್ಲ. ಇಂದಿನ ಎಲ್ಲಾ ಅಪರಾಧಗಳಿಗೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸಾಮಾನ್ಯ ಜ್ಞಾನದ ಕೊರತೆಯೇ ಕಾರಣ. ಸುಮಾರು ಶೇ. 70 ರಿಂದ 80 ರಷ್ಟು ಪ್ರಕರಣಗಳು ನ್ಯಾಯಾಲಯಕ್ಕೆ ಬರಲು ಅರ್ಹವಲ್ಲ. ಅವೆಲ್ಲವೂ ದುರಾಶೆ, ಅಸೂಯೆ ಮತ್ತು ಪ್ರತೀಕಾರದ ಕಾರಣದಿಂದಾಗಿವೆ; ಅಂತಹ ಪ್ರಕರಣಗಳು ಯಾವಾಗಲೂ ಕೆಟ್ಟ ಉದ್ದೇಶವನ್ನು ಹೊಂದಿರುತ್ತವೆ. ಆದ್ದರಿಂದ ಭಾರತೀಯ ನ್ಯಾಯಾಲಯಗಳಿಗೆ ಅನಾವಶ್ಯಕ ಪ್ರಕರಣಗಳು ಹೊರೆಯಾಗಿವೆ. ಅಮೆರಿಕದಲ್ಲಿ ಒಬ್ಬ ನ್ಯಾಯಾಧೀಶರು ದಿನಕ್ಕೆ ಒಂದು ಪ್ರಕರಣವನ್ನು ಮಾತ್ರ ಕೇಳುತ್ತಾರೆ, ಆದರೆ ಇಲ್ಲಿ ನಾವು ದಿನಕ್ಕೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ಕೇಳುತ್ತೇವೆ, ಆದರೂ ಕೂಡ ಇನ್ನೂ ಲಕ್ಷಾಂತರ ಪ್ರಕರಣಗಳು ನ್ಯಾಯಾಲಯದ ಮುಂದೆ ಬಾಕಿ ಉಳಿದಿವೆ. ನಾವು ಪರಸ್ಪರ ಪ್ರೀತಿ, ಗೌರವ ಮತ್ತು ಉತ್ತಮ ಸಂಬಂಧವನ್ನು ಹೊಂದಿರಬೇಕು. ಪೆÇಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರುವ ಮೊದಲು ನಾವು ಎರಡು ಬಾರಿ ಯೋಚಿಸಬೇಕು” ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಅವರ ಸಾಮಥ್ರ್ಯವನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದ ಅವರು “ನಾನು ಬಡ ಕುಟುಂಬದಲ್ಲಿ ಜನಿಸಿದೆ. ಬಡ ರೈತ ಕುಟುಂಬದಿಂದ ಬಂದಿರುವುದೆ ನಮ್ಮ ಹಿನ್ನಡೆಗೆ ಕಾರಣವಾಗಬಾರದು. ನಾವು ಕೀಳರಿಮೆಯಿಂದ ಹೊರಬರಬೇಕು, ಸಂಕೀರ್ಣದ ಬಗ್ಗೆ ಚಿಂತಿಸಬಾರದು ಮತ್ತು ನಮಗೆ ಸಹಾಯ ಮಾಡುವವರು ಯಾರು ಇಲ್ಲ ಎಂದು ಭಾವಿಸಬೇಡಿ; ನಾವು ದೇವರನ್ನು ತಂದೆಯನ್ನಾಗಿ ಮಾಡಬೇಕು. ಯಾವಾಗಲೂ ಸಕಾರಾತ್ಮಕವಾಗಿರಿ, ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ನೊಡುತ್ತಿದ್ದೆವೆ. ಇದು ತುಂಬಾ ದುರದೃಷ್ಟಕರ. ಹಾಗಾಗಿ ನಿಮಗೆ ನನ್ನ ಸಲಹೆಯೆಂದರೆ ಎಂದಿಗೂ ಹಾಗೆ ಯೋಚಿಸಬೇಡಿ, ನಿಮ್ಮ ಮೇಲೆ ವಿಶ್ವಾಸವಿಡಿ ಮತ್ತು ಒಂದು ದಿನ ನೀವು ಅರ್ಹವಾದದ್ದನ್ನು ಸಾಧಿಸುವಿರಿ” ಎಂದು ಹೇಳಿದರು.
ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಇಂದು ನಮ್ಮ ಕ್ಯಾಂಪಸ್ ಹಬ್ಬದ ವಾತಾವರಣದಿಂದ ತುಂಬಿದೆ, ಎಲ್ಲಾ ಅಂಕುರ ಕಾರ್ಯಕ್ರಮಗಳಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಪ್ರತಿಷ್ಟಿತ ಸಂಸ್ಥೆಗಳ ಅತ್ಯುತ್ತಮ ಸೌಲಭ್ಯಗಳನ್ನು ನಿಮಗೆ ಒದಗಿಸಲು ನಾವು ಹೆಚ್ಚು ಹೆಚ್ಚು ಕ್ರೀಡೆ ಮತ್ತು ಸಾಂಸ್ಕೃತಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತೇವೆ. ನಮ್ಮದು ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರಮುಖ ಶಿಕ್ಷಣ ಸಂಸ್ಥೆಯೇ ಹೊರತು ಸಾಮನ್ಯ ಶಿಕ್ಷಣ ಸಂಸ್ಥಯಲ್ಲ. ಸರ್ಕಾರವು ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಗ್ರಾಮೀಣ ಜನರಿಗೆ ನಗರ ಸೌಲಭ್ಯಗಳನ್ನು ಮತ್ತು ಪ್ರತಿಷ್ಟಿತ ಸಂಸ್ಥೆಯ ಸೌಲಭ್ಯಗಳನ್ನು ಒದಗಿಸಲು ಸಿಯುಕೆಯಂತಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಉತ್ತಮ ನಾಗರಿಕರನ್ನಾಗಿಸಲು ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಒಳ್ಳೆಯ ನಾಗರಿಕರು ಅಪರಾಧ ಮಾಡುವುದಿಲ್ಲ. ಅಪರಾಧಗಳಿಗೆ ನಮ್ಮ ಅಹಂಕಾರ ಮತ್ತು ದುರಹಂಕಾರವೇ ಕಾರಣ. ವಿಶ್ವವಿದ್ಯಾಲಯದಲ್ಲಿ ನಾವು ಅಹಂಕಾರ ಮತ್ತು ದುರಹಂಕಾರವನ್ನು ತೊಡೆದುಹಾಕಲು ಮತ್ತು ಸಹನೆಯ ವ್ಯಕ್ತಿತ್ವವನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ಕಲಿಸಬೇಕು ಮತ್ತು ಕಲಿಯಬೇಕು. ಮಹಾಭಾರತದಲ್ಲಿ ಏನಾಯಿತು ಎಂದು ನೋಡಿದ್ದೇವೆ. ದ್ರುತರಾಷ್ಟ್ರನ ಕೆಟ್ಟ ಮಹತ್ವಾಕಾಂಕ್ಷೆಗಳು ಮತ್ತು ದುರ್ಯೋಧನನ ದುರಹಂಕಾರದಿಂದಾಗಿ ಇಡೀ ಮಾನವಕುಲವು ಅಪಾಯಕ್ಕೆ ಸಿಲುಕಿತು. ನಾವು ಕ್ರಿಡಾ ಮನೋಭಾವವನ್ನು ಬೇಳೆಸಿಕೊಳ್ಳಬೇಕೆ ವಿನಃ ಕೆಟ್ಟ ಮಹತ್ವಾಕಾಂಕ್ಷೆಗಳು ಮತ್ತು ದುರಹಂಕಾರದ ಗುಣಗಳಲ್ಲ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕ್ರಿಡಾ ಮನೋಭಾವವನ್ನು ಬೇಳಿಸಿಕೊಳ್ಳಲು ಮತ್ತು ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ” ಎಂದು ಅವರು ಹೇಳಿದರು.
ಕುಲಸಚಿವ ಪೆÇ್ರ.ಬಸವರಾಜ ಡೋಣೂರ ಮಾತನಾಡಿ, “ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಹೊಂದಿರುತ್ತಾನೆ. ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವರಿಗೆ ವೇದಿಕೆ ಮತ್ತು ಪೆÇ್ರೀತ್ಸಾಹ ಮಾತ್ರ ಬೇಕು. ಅಂಕುರ ಅಂತಹ ವೇದಿಕೆಯನ್ನು ಒದಗಿಸಿದೆ. ಕಳೆದ 15-20 ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಸಾಮಥ್ರ್ಯ ಮತ್ತು ಸೃಜನಶೀಲ ಪ್ರತಿಭೆಯನ್ನು ತೋರಿಸಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಬೆಳೆಯಲು ಸಹಕಾರಿಯಾಗುತ್ತವೆ” ಎಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನ ಡೀನ್ ಪೆÇ್ರ.ಆರ್.ಎಸ್.ಹೆಗಡಿ ಅಂಕುರ ಉತ್ಸವದ ಹಿಂದಿನ ಉದ್ದೇಶಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ರೀಡಾ ಸಂಯೋಜಕ ಡಾ.ಆಂಜನೇಯುಲು ಸ್ವಾಗತಿಸಿದರು, ಸಾಂಸ್ಕೃತಿಕ ಸಂಯೋಜಕ ಡಾ.ಮಲ್ಲಿಕಾರ್ಜುನ ಹೂಗಾರ ವಂದಿಸಿದರು, ಡಾ.ರಾಜೀವ್ ಜೋಶಿ 2012ರಲ್ಲಿ ಆರಂಭವಾದ ಅಂಕುರ ಪಯಣದ ಕುರಿತು ಮಾತನಾಡಿದರು. ಡಾ. ಜಯದೇವಿ ಜಂಗಮಶೆಟ್ಟಿ, ಡಾ. ರವಿಕಿರಣ ನಾಕೊಡ ಮತ್ತು ಡಾ. ಸ್ವಪನಿಲ್ ಚಾಪೆಕರ್ ನಾಡಗೀತೆ ಮತ್ತು ರಾಷ್ಟ್ರ ಗೀತೆ ಹಾಡಿದರು.
ವಿವಿಧ ಸಾಂಸ್ಕೃತಿಕ, ಕ್ರೀಡೆ ಹಾಗೂ ಅವಿಷ್ಕಾರ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.