ಕಾಮನ್ ಸರ್ವೀಸ್ ಕೇಂದ್ರ ಉದ್ಘಾಟನೆ

ಕೋಲಾರ,ಡಿ.೬: ತಾಲೂಕಿನಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಕೇಂದ್ರ ಸರ್ಕಾರದ ಕಾರ್ಯಕ್ರಮವಾದ ಡಿಜಿಟಲ್ ಸೇವಾ ಕೇಂದ್ರ (ಕಾಮನ್ ಸರ್ವಿಸ್ ಸೆಂಟರ್) ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ, ನಮ್ಮ ಪೂಜ್ಯರ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖೇನ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಗ್ರಾಮೀಣ ಮಟ್ಟದ ಜನತೆಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದು, ವಯಸ್ಸಾದವರಿಗೆ ಮಾಶಾಸನ ವಿತರಣೆ ಅಂಗವಿಕಲರಿಗೆ ವೀಲ್ಚೇರ್, ಕೃಷಿ ಕಾರ್ಮಿಕರಿಗೆ ಬೇಕಾದಂತಹ ಕೃಷಿ ತರಬೇತಿಗಳು, ಅದಕ್ಕೆ ಪ್ರೋತ್ಸಾಹ ಧನ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನಗಳು, ಹಾಲಿನ ಡೈರಿ ಗೆ ಅನುದಾನಗಳು, ಕೆರೆ ಹೋಳೆತ್ತುವ ಕಾರ್ಯಕ್ರಮ ಹೀಗೆ ಕಾರ್ಯಕ್ರಮಗಳನ್ನ ಮಾಡಲಾಗುತ್ತಿದೆ ಎಂದರು.
ಪ್ರಸ್ತುತ ಗ್ರಾಮೀಣ ಮಟ್ಟದ ಎಲ್ಲಾ ಬಗೆಯ ಕಾರ್ಮಿಕರಿಗೆ ಹುಟ್ಟಿನಿಂದ ಸಾಯುವವರೆಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬೇಕಾದಂತಹ ಸರ್ಕಾರಿ ದಾಖಲೆಗಳಾದ ರೇಷನ್ ಕಾರ್ಡ್, ಆಯುಶ್ಮಾನ್ ಕಾರ್ಡ್, ಆಧಾರ್‍ಕಾರ್ಡ್, ಕಾರ್ಮಿಕರ ಕಾರ್ಡ್, ಜನನ ಪ್ರಮಾಣ ಪತ್ರ, ಹೀಗೆ ಸುಮಾರು ೪೯ ದಾಖಲೆಗಳನ್ನು ವಿತರಣೆ ಮಾಡುವ ಡಿಜಿಟಲ್ ಸೇವಾ ಕೇಂದ್ರವನ್ನು ನಮ್ಮ ಧರ್ಮಸ್ಥಳ ಸಂಸ್ಥೆಯಿಂದ ಇಡೀ ರಾಜ್ಯಾದ್ಯಾಂತ ಮಾಡುತ್ತಿದ್ದು, ಕೋಲಾರ ತಾಲ್ಲೂಕಿನಲ್ಲಿ ಸುಮಾರು ೪೦ ಕಡೆ ಪ್ರಾರಂಭಿಸಿದ್ದು ಜನಸಾಮಾನ್ಯರಿಗೆ ಕೇವಲ ಸರ್ಕಾರಿ ಶುಲ್ಕವನ್ನು ಮಾತ್ರ ಪಾವತಿಸಿ ಈ ಸೌಲಭ್ಯವನ್ನು ಜನಗಳಿಗೆ ಈ ಎಲ್ಲಾ ದಾಖಲಾತಿಗಳನ್ನು ಒದಗಿಸಿಕೊಡುತ್ತೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಿ.ಎಸ್.ಸಿ. ವ್ಯವಸ್ಥಾಪಕರಾದ ಪವನ್ ಮಾತನಾಡಿ, ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ತಲುಪಿಸಿ ಎಲ್ಲರೂ ಕೂಡ ಈ ಸೌಲಭ್ಯ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಶಿಕುಮಾರ್, ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟನಾ ಆಯುಕ್ತರು ವಿ.ಬಾಬು, ತಾಲೂಕಿನ ಎಲ್ಲ ಸಂಸ್ಥೆಯ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.