
ಬರ್ಮಿಂಗ್ಹ್ಯಾಮ್ ಆ.3-ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವೇಟ್ಲಿಫ್ಟಿಂಗ್ 109 ಕೆಜಿ ವಿಭಾಗದಲ್ಲಿ ಲವ್ಪ್ರೀತ್ ಸಿಂಗ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಇದರೊಂದಿಗೆ ಭಾರತ 5 ಚಿನ್ನ, 5 ಬೆಳ್ಳಿ ಹಾಗು 4 ಕಂಚು ಸೇರಿ ಒಟ್ಟು 14 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಲವ್ಪ್ರೀತ್ ಸಿಂಗ್ ಒಟ್ಟು 355 ಕೆಜಿ ವೇಟ್ಲಿಫ್ಟ್ ಮಾಡಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ನ್ಯಾಚ್ ವಿಭಾಗದಲ್ಲಿ 163 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 192 ಕೆ.ಜಿ ಭಾರವನ್ನು ಎತ್ತಿದರು. ವೇಟ್ಲಿಫ್ಟಿಂಗ್ ನಲ್ಲಿ ಭಾರತ ಗಳಿಸಿದ 10ನೇ ಪದಕವಾಗಿದೆ.