ಕಾಮನ್ ವೆಲ್ತ್ ಕ್ರೀಡೆ: ಭಾರತಕ್ಕೆ‌ 2 ನೇ ಚಿನ್ನ ವೇಟ್ ಲಿಫ್ಟಿಂಗ್ ನಲ್ಲಿ ಜೆರಮಿಗೆ ಸ್ವರ್ಣ:

ಬರ್ಮಿಂಗ್ವಹ್ಯಾಮ್.ಜು.31- ಕಾಮನ್ ವೆಲ್ತ್ವಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ ಲಭಿಸಿದೆ.
ಈ ಅಭೂತಪೂರ್ವ ಸಾಧನೆಗೆ‌ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪುರುಷರ 67 ಕೆ.ಜಿ. ವೇಟ್ ಲಿಫ್ಟಿಂಗ್ ನ ಫೈನಲ್ ಪಂದ್ಯದಲ್ಲಿ ಜೆರಮಿ ಲಾಲ್ರಿನ್ನುಂಗಾ ಚಿನ್ನ ಗೆದ್ದು ಬೀಗಿದ್ದಾರೆ.ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತ ಎರಡನೇ ಚಿನ್ನದ ಪದಕ ಬಾಚಿಕೊಂಡಂತಾಗಿದೆ.
ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತಿದರು. ಸ್ನ್ಯಾಚ್‌ನಲ್ಲಿ 140 ಕೆಜಿ ಭಾರ ಹಾಗೂ ಜರ್ಕ್​ನಲ್ಲಿ 160 ಕೆಜಿ ಎತ್ತುವ ಮೂಲಕ ಸ್ವರ್ಣ ಪದಕವನ್ನು ಮುಡಿಗೇರಿಸಿದರು.
ಭಾರತ‌ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇದುವರೆಗೆ ಆರು ಪದಕಗಳು ಬಂದಿವೆ. ಇಂದು ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಫೈನಲ್‌ನಲ್ಲಿ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.
ನಿನ್ನೆ ಮೀರಾಬಾಯಿ ಚಾನು ಚಿನ್ನ, ಸಂಕೇತ್ ಮಹದೇವ್ ಸರ್ಗರ್ ಮತ್ತು ಬಿಂದ್ಯಾರಾಣಿ ದೇವಿ ತಲಾ ಒಂದೊಂದು ಬೆಳ್ಳಿ ಮತ್ತು ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದುಕೊಂಡಿದ್ದರು.