ಕಾಮನ್ ವಲ್ತ್ ಕ್ರೀಡೆ ಭಾರತಕ್ಕೆ ಮೊದಲ ಪದಕ ವೇಟ್ ಲಿಫ್ಟಿಂಗ್ ನಲ್ಲಿ ಸಂಕೇತ್ ಗೆ ರಜತ

ಬರ್ಮಿಂಗ್ ಹ್ಯಾಮ್, ಜು.30 ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪದಕ ಬೇಟೆ ಆರಂಭವಾಗಿದ್ದು, 55 ಕೆಜಿ ವೇಟ್​ ಲಿಫ್ಟಿಂಗ್​​ ವಿಭಾಗದಲ್ಲಿ ಭಾರತದ ಸಂಕೇತ್ ಸರ್ಗರ್​​​​ ಬೆಳ್ಳಿ ಪದಕ ಮುಡಿಗೇರಿಸಿದ್ದಾರೆ.
ಈ ಅಭೂತಪೂರ್ವ ಗೆಲುವಿನೊಂದಿಗೆ‌ ಸಂಕೇತ್ ಅವರು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಸುತ್ತಿನಲ್ಲಿ 107 ಕೆಜಿ, ಎರಡನೇ ಸುತ್ತಿನಲ್ಲಿ 111 ಕೆಜಿ ಭಾರ ಎತ್ತಿದ್ದ ಸಂಕೇತ್ ಕೊನೆಯ ಸುತ್ತಿನಲ್ಲಿ 113ಕೆಜಿ ಭಾರ ಎತ್ತುವ ಮೂಲಕ ಬೆಳಿಪದಕ ತಮ್ಮದಾಗಿಸಿಕೊಂಡಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ವೇಟ್​ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಮೊಹಮ್ಮದ್ ಚಿನ್ನದ ಪದಕ ಬಾಚಿಕೊಂಡರು.
,ಶ್ರೀಲಂಕಾದ ಅಥ್ಲೀಟ್ಸ್​ ಕಂಚಿಗೆ ತೃಪ್ತಿಪಟ್ಟುಕೊಂಡರು. ಫೈನಲ್​ ಪಂದ್ಯದಲ್ಲಿ 139 ಕೆಜಿ ಭಾರ ಎತ್ತುವ ವೇಳೆ ಸಂಕೇತ್ ಗಾಯಗೊಂಡವಕಾರಣ ಮಲೇಷ್ಯಾದ ಮೊಹಮ್ಮದ್ ಚಿನ್ನ ಪದಕ ಗೆದ್ದುಬೀಗಿದರು.