
ಬರ್ಮಿಂಗ್ ಹ್ಯಾಂ, ಜು. ೩೦- ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ೧೦೦ ಮೀ. ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಶ್ರೀಹರಿ ನಟರಾಜ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್ ಸ್ಪರ್ಧೆಯಲ್ಲಿ ೫೪.೫೫ ಸೆಕೆಂಡ್ಗಳಲ್ಲಿ ಗುರಿ ತಲುಪಿ ಶ್ರೀಹರಿ ಪದಕ ಸುತ್ತಿಗೆ ಪ್ರವೇಶಿಸಿದ್ದಾರೆ.
೨೧ ವರ್ಷದ ಶ್ರೀಹರಿ ನಟರಾಜ್ ೪ನೇ ಹಾಗೂ ಒಟ್ಟಾರೆ ೭ನೇ ಸ್ಥಾನ ಪಡೆದು ಫೈನಲ್ಗೆ ಲಗ್ಗೆ ಹಾಕಿದ್ದಾರೆ.
ದಕ್ಷಿಣ ಆಫ್ರಿಕಾದ ಪೀಟರ್ ಕೊಯಟ್ಜ್ ಕೇವಲ ೫೩.೬೭ ಸೆಕೆಂಡ್ಗಳಲ್ಲಿ ನಿಗದಿತ ದೂರ ಕ್ರಮಿಸಿ ಮೊದಲ ಸ್ಥಾನ ಪಡೆದರು.
ದೆಹಲಿಯಲ್ಲಿ ೨೦೧೦ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾರತದ ಪ್ರಶಾಂತ್ ಕರ್ಮಾಕರ್ ಕಂಚಿನ ಪದಕ ಗೆದ್ದಿದ್ದರು. ಇದಾದ ಬಳಿಕ ಈ ಕ್ರೀಡಾಕೂಟದಲ್ಲಿ ೨ನೇ ಈಜುಪಟು ಪದಕ ಗೆಲ್ಲುವತ್ತ ಕರ್ನಾಟಕದ ಶ್ರೀಹರಿ ದಾಪುಗಾಲು ಹಾಕಿದ್ದಾರೆ.
ಜಪಾನ್ ರಾಜಧಾನಿ ಟೋಕಿಯಾದಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ೧೦೦ ಮೀ. ಬ್ಯಾಕ್ಸ್ಟ್ರೋಕ್ ಶ್ರೀಹರಿ ನಟರಾಜ್ ೫೪:೩೧ ಸೆಕೆಂಡ್ಗಳಲಿ ಗುರಿ ತಲುಪಿ ೨೭ನೇ ಸ್ಥಾನ ಪಡೆದಿದ್ದರು.