ಕಾಮನಳ್ಳಿ ಶಾಲಾ ವಾರ್ಷಿಕೋತ್ಸವದಲ್ಲಿ ಪಾದಪೂಜೆ

ಆಳಂದ:ಫೆ.25: ತಾಲೂಕಿನ ಕಾಮನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಸಂಭ್ರಮ ಸಡಗರದಿಂದ ನಡೆಯಿತು. ಅಲ್ಲದೆ, ರಂಭದಲ್ಲಿ ವಿದ್ಯಾರ್ಥಿಗಳಿಂದ ಆಗಮಿಸಿದ್ದ ಅವರ ತಂದೆ, ತಾಯಿಗಳ ಪಾದಪೂಜೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡ ಶಾಲೆ ಉಳಿವಿಗಾಗಿ ಎಲ್ಲರೂ ಶ್ರಮಿಸೋಣಾ, ಶಾಲೆಗಳು ಜೀವಂತ ದೇವಾಲಯ, ತಂದೆ, ತಾಯಿ ಮೊದಲು ದೇವರಾಗಿದ್ದಾರೆ. ಒಳ್ಳೆಯ ಸಂಸ್ಕಾರ, ಉನ್ನತ ಶಿಕ್ಷಣ ಪಡೆದು ಗ್ರಾಮ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಔಷಧಿ ವ್ಯಾಪಾರಿ ಉದಯಕುಮಾರ ಕುಮಾರ್‍ಸ್ವಾಮಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಶಾಲಾ ಗ್ರಂಥಾಲಯವನ್ನು ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಸರಡಗಿ ಅವರು ಉದ್ಘಾಟನೆ ನೆರವೇರಿಸಿದರು. ಗ್ರಾಮದ ಮಲ್ಲಿನಾಥ ಪಾಟೀಲ ದಾಸೋಹ ಕೈಗೊಂಡರು. ಸಮಾಜ ಕಲ್ಯಾಣ ಇಲಾಖೆಯ ಶ್ರೀಶೈಲ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯ ಸ್ಮಾರ್ಟ್ ಕ್ಲಾಸ್ ಕೇಂದ್ರವನ್ನು ನರೋಣಾ ಭೀಮಜೋತಿ ಶಾಲೆ ಮುಖ್ಯ ಶಿಕ್ಷಕ ನಾಗಪ್ಪ ಎಸ್. ದೇವಂತಗಿ ಉದ್ಘಾಟಿಸಿಡಿದರು. ವೇದಿಕೆಯ ಕಟ್ಟೆಯನ್ನು ಗ್ರಾಪಂ ಸದಸ್ಯ ಸಂಜಯ್‍ಕುಮಾರ್ ಷಣ್ಮುಖ ಉದ್ಘಾಟನೆ ಕೈಗೊಂಡರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸುರೇಶ ಸರಡಗಿ ಅಧ್ಯಕ್ಷತೆ ವಹಿಸಿದ್ದರು.

ಬಿಆರ್‍ಸಿ ಕಲ್ಯಾಣರಾವ್ ಬಿಕ್ಕಮಳೆ, ಸಿಆರ್‍ಪಿ ನಾಗಪ್ಪ ಮದರಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಶುಶೀಲಾಬಾಯಿ ಕಾಶಿನಾಥ್ ನೆಲ್ಲೂರೆ, ಗುತ್ತಿಗೆದಾರ ಮಹದೇವ್ ಕುಮಟಗಿ, ಪರಮೇಶ್ವರ್ ಸರಡಗಿ, ಚಂದು ಸೋನಕಾಂಬಳೆ ಸೇರಿ ಗ್ರಾಮದ ಮುಖಂಡರು, ನಿವೃತ್ತ ನೌಕರರು ಸರ್ಕಾರಿ ನೌಕರರು ದಾನಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮುಖ್ಯ ಶಿಕ್ಷಕ ಮಲ್ಕಪ್ಪಾ ಇಕ್ಕಳಕಿ ಸ್ವಾಗತಿಸಿದರು. ಬಸವರಾಜ ಬೆಳಮಗಿ ನಿರೂಪಿಸಿದರು. ಶಿಕ್ಷಕ ಸಂಗನಬಸವ ಪರೇಣಿ ವಂದಿಸಿದರು. ನಂತರ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಶಿಕ್ಷಕ ಮಹಾಂತೇಶ ಗಡೆದ ನೆರವೇರಿಸಿಕೊಟ್ಟರು.