ಕಾಮನಟಗಿ 1 ನೇ ವಾರ್ಡಗೆ ಕುಡಿಯುವ ನೀರಿನ ಸೌಲಭ್ಯ

ಹುಣಸಗಿ ನ 14 : ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟ ಗೊಂಡಿದ್ದ, ಕಾಮನಟಗಿ ಗ್ರಾಮ ಪಂಚಾಯತನ ವಾರ್ಡ್ ನಂ 1 ಕ್ಕೆ, 20 ವರ್ಷಗಳಿಂದ ಕುಡಿಯಲು ನೀರಿಲ್ಲ ಎಂಬ ವರದಿಗೆ ಸ್ಪಂದಿಸಿ, ಸ್ಥಳಕ್ಕೆ ಹುಣಸಗಿ ತಾಲೂಕು ಪಂಚಾಯತ ಇಓ, ಬಸವರಾಜ ಸ್ವಾಮಿ ಹಿರೇಮಠ್, ಭೇಟಿನೀಡಿ, ಪಿಡಿಒ ಗೆ ತರಾಟೆಗೆ ತೆಗೆದುಕೊಂಡು, ಕುಡಿಯುವ ನೀರಿನ ಸಮಸ್ಯೆಗೆ ಕೆಲವೇ ದಿನದಲ್ಲಿ ತಾತ್ಕಾಲಿಕ ಪರಿಹಾರ ಒದಗಿಸುವಂತೆ ಈ ಹಿಂದೆ ಸೂಚಿಸಿದ್ದರು. ಹಾಗೂ ಇನ್ನು ಕೆಲವೇ ದಿನಗಳಲ್ಲಿ ಜೆ,ಜೆ,ಎಮ್, ಯೋಜನೆಯಲ್ಲಿ ಪ್ರತಿ ಮನೆ ಮನೆಗೆ ನೀರು ಬರುತ್ತದೆ. ಆತಂಕ ಪಡುವ ಅಗತ್ಯತೆಯಿಲ್ಲ ನಿಮ್ಮ ಬಹುದಿನದ ಕನಸು ಇನ್ನು ಕೆಲವೇ ದಿನಗಳಲ್ಲಿ ನನಸು ಎಂದು ಇಒ, ಬಸವರಾಜ ಸ್ವಾಮಿ ಹಿರೇಮಠ ಅಭಿಪ್ರಾಯ ಪಟ್ಟಿದ್ದರು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಗ್ರಾಮ ಪಂಚಾಯತ ಅಧಿಕಾರಿಗಳು, ಅಧ್ಯಕ್ಷರು, ಈ ಸಮಸ್ಸೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಇದ್ದರು. ಆದರೆ ಕಾಮನಟಗಿ ಗ್ರಾಮ ಪಂಚಾಯತಗೆ ಬೀಗ ಜಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಹುಣಸಗಿ ತಹಸೀಲ್ದಾರ್ ಕಛೇರಿಗೆ ಮನವಿ ಪತ್ರವನ್ನು ಗ್ರಾಮಸ್ಥರು ಸಲ್ಲಿಸಿದ್ದರು. ಇದರಿಂದ ಎಚ್ಚೆತ್ತು ಕೊಂಡ ಗ್ರಾಮ ಪಂಚಾಯತ ಅಧಿಕಾರಿಗಳು, ಗ್ರಾಮ ಪಂಚಾಯತಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರೆ ಊರಿನ ಮರ್ಯಾದೆ ಹೋಗುತ್ತದೆ ಎಂದು ಸಮಸ್ಯೆಯನ್ನು ಬಗೆಹರಿಸಲು 20 ವರ್ಷಗಳ ಬೇಡಿಕೆಗೆ ಇವತ್ತು ಸಕಲ ಸನ್ನದ್ಧರಾಗಿ ಜೆಸಿಬಿ ಯಂತ್ರವನ್ನು ತಗೆದುಕೊಂಡು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕಟ್ಟಿಮನಿ, ಎಸ್ಸಿ ವಾರ್ಡ್ 1 ರಲ್ಲಿ ಸುಮಾರು 20 ವರ್ಷಗಳಿಂದ ಕುಡಿಯಲು ಯೋಗ್ಯವಾದ ನೀರನ್ನು ವ್ಯವಸ್ಥೆ ಮಾಡಲು ಗ್ರಾಮ ಪಂಚಾಯತ ಅಧಿಕಾರಿಗಳಿಂದ ಸಾಧ್ಯವಾಗಿರಲಿಲ್ಲ ಆದ್ದರಿಂದ ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯತಗೆ ಬೀಗಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಿದಾಗ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಇದ್ದರು.