ಕಾಮಗಾರಿ ಸ್ಥಳದಲ್ಲೇ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

ದಾವಣಗೆರೆ. : ತಾಲ್ಲೂಕಿನ ತೋಳಹುಣಸೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಟ್ಟೋಬನಹಳ್ಳಿ ತಾಂಡದಲ್ಲಿಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ” ಅಡಿಯಲ್ಲಿ ನೊಂದಾಯಿಸಿ ಕೊಂಡಿರುವ  ಕಾರ್ಮಿಕರು ಬದು ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು.ತಾಲ್ಲೂಕು ಪಂಚಾಯತಿ ವತಿಯಿಂದ ಈ ಕಾರ್ಮಿಕರಿಗೆ ಉದ್ಯೋಗದ ಸ್ಥಳದಲ್ಲಿಯೇ “ಅಸಾಂಕ್ರಾಮಿಕ ರೋಗ ಹರಡದಂತೆ ಉಚಿತ ಆರೋಗ್ಯ   ಪರೀಕ್ಷೆಯನ್ನು ತಾಲ್ಲೂಕು ಪಂಚಾಯಿತಿ ಮತ್ತು ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ ಸಹಯೋಗದವತಿಯಿಂದ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿಯ ತಾಲ್ಲೂಕು ಸಂಯೋಜಕ ಅಂಜಿನಪ್ಪ .ಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮೆಡಿಕಲ್ ಹೆಲ್ತ್ ಆಫೀಸರ್ ಯಶವಂತ  ಮತ್ತು ಪಂಚಾಯಿತಿ ಸದಸ್ಯರುಗಳು, ಪಂಚಾಯತಿ ಕಾರ್ಯದರ್ಶಿ , ಸ್ವಯಂಸೇವಕಿ ಪವಿತ್ರ ಆಶಾ ಕಾರ್ಯಕರ್ತೆ ಜ್ಯೋತಿ ಭಾಗವಹಿಸಿ ಕಾರ್ಮಿಕರಿಗೆ ಉತ್ತಮ ಆರೋಗ್ಯ ಭಾಗ್ಯ ದೊರೆಯಲಿ ಎಂದು ಶುಭ ಹಾರೈಸಿದರು.