ಕಾಮಗಾರಿ ಸಕಾಲಕ್ಕೆ ಪೂರ್ಣಗೊಳಿಸಿ: ಶಾಸಕ ದರ್ಶನಾಪುರ

ಶಹಾಪುರ : ಫೆ.26:ಗ್ರಾಮೀಣ ಭಾಗದ ಜನರ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ಜೆಜೆಎಮ್ ಕೈಗೆತ್ತಿಕೊಳ್ಳಲಾಗಿದೆ ಎಂದು ಕಾಮಗಾರಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಪಟ್ಟಣ ಸಮೀಪದ ತಿಪ್ಪನಟಗಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜೆಜೆಎಮ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮತಕ್ಷೇತ್ರದ ಪ್ರತಿ ಯೊಂದು ಗ್ರಾಮಕ್ಕೂ ಮೂಲ ಸೌಕರ್ಯ ಅಧಿಕಾರಕ್ಕೆ ಗಳನ್ನು ಪ್ರಾಮಾಣಿಕವಾಗಿ ಒದಗಿಸಿದ್ದೇನೆ. ನೀವು ಸರ್ಕಾರಕ್ಕೆ ಕೊಟ್ಟ ತೆರಿಗೆ ಹಣದಿಂದಲೇ ಈ ಅಭಿವೃದ್ಧಿ ಕಾಮಗಾರಿಗಳು ಮಾಡುತ್ತಿದ್ದು, ಇದು ನಿಮ್ಮ ದುಡ್ಡು ಉತ್ತಮ ಕಾಮಗಾರಿ ಮಾಡಿಸಿಕೊಳ್ಳುವುದು ಗ್ರಾಮಸ್ಥರ ಜಬ್ದಾರಿಯಾಗಿದೆ ಎಂದರು.ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಾಗಿವೆ. ಈಗಿನ
ಬಿಜೆಪಿ ಪಕ್ಷದವರು ವಾಮಾ ಮಾರ್ಗದಿಂದ ಬಂದು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಇವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆಯಿಲ್ಲ, ಪ್ರಧಾನಿ ಮೋದಿ ಅವರು, ಶ್ರೀಮಂತರ ಸಾಲಾ ಮನ್ನಾ ಮಾಡುತ್ತಾರೆ. ಆದರೆ, ರೈತರ ಸಾಲ ಮನ್ನಾ ಮಾಡಲಿಲ್ಲ. ಕೇವಲ ಭಾಷಣದಲ್ಲಿ ಮಾತ್ರ ನಮ್ಮದು ರೈತ ಪರ ಸರ್ಕಾರ ಎಂದು ಘೋಷಣೆ ಮಾಡುತ್ತಾರೆ. ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ
ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮರಿಗೌಡ ಹುಲಕಲ್, ಡಿಸಿಸಿ ಬ್ಯಾಂಕ ನಿರ್ದೇಶಕ ಬಾಪುಗೌಡ ಪಾಟೀಲ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಚಿಂಚೋಳಿ, ಜೆಇ ಸ್ಫೂರ್ತಿ ಕರಡಕಲ್, ಮಹಾದೇವಪ್ಪ ಸಾಲಿಮನಿ, ಮುಖಂಡರಾದ ಭೀಮಣ್ಣ ನಾರಾಯಣಪೂರ, ಮಾನಪ್ಪ ಸೂಗೂರ ,ಮಲ್ಲಣ್ಣ ಉಳಂಡಿಗೆರಿ,
ಹಣಮಂತ್ರಾಯ ಸಿಡಬಿ, ದೇವಿಂದ್ರಪ್ಪ ಹವಾಲ್ದಾರ,
ಸಣ್ಣೇಕಪ್ಪ ಸಾಹುಕಾರ ಮಾಲಗತ್ತಿ, ಸೇರಿದಂತೆ ಗ್ರಾ ಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.