ಕಾಮಗಾರಿ ಶೀಘ್ರ ಪೂರ್ಣಗೋಳಿಸಲು ಮನವಿ

ಸವಣೂರ,ಜ.13:ವಸತಿ ಯೋಜನೆಯಡಿ ನಗರದÀ ಹೊರವಲಯದ ಕೃಷ್ಣಾ ನಗರದ ಬಳಿ ನಿರ್ಮಾಣಗೊಳ್ಳುತ್ತಿರುವ ಜಿ+1 ಗುಂಪು ಮನೆ ಯೋಜನೆಯ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸಬೇಕು ಹಾಗೂ ವಸತಿ ನಿರ್ಗತಿಕರಿಗೆ ಯೋಜನೆಯಡಿ ಮನೆ ನೀಡಬೇಕು ಎಂದು ಒತ್ತಾಯಿಸಿ ಪಲಾನುಭವಿಗಳು ಕಂದಾಯ ಇಲಾಖೆ ಕಚೇರಿಯ ಎದುರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮುಖೇನ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಅಲೆಮಾರಿ ಜನಾಂಗ ಸೇರಿದಂತೆ ವಿವಿಧ ಸಮಾಜದ ನಿರ್ಗತಿಕರು ಒಂದೆ ಸೂರಿನಡಿ ಜೀವನ ಕೈಗೊಳ್ಳಲು ಸರ್ಕಾರ ಜಿ+1 ಗುಂಪು ಮನೆ ಯೋಜನೆ ಜಾರಿಗೆ ತಂದಿತು. ಈ ಯೋಜನೆ ಜಾರಿಗೆ ಬಂದ ಸಂದರ್ಭದಲ್ಲಿ ನಗರದಲ್ಲಿ ಸುಮಾರು 1600 ವಸತಿ ರಹಿತ ನಿರ್ಗತಿಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅದರಲ್ಲಿ 1020 ಜನರ ಅರ್ಜಿಗಳನ್ನು ಡಿಪಿಆರ್ ಮೂಲಕ ಅನುಮೋದಿಸಲಾಗಿದೆ. ಇನ್ನುಳಿದ 531 ಅರ್ಹ ಪಲಾನಿಭವಿಗಳನ್ನು ಸನ್ 2014ರಲ್ಲಿ ವಸತಿ ಕಲ್ಪಿಸಿಕೊಡುವ ಭರವಸೆ ನೀಡಿ, ಆ ಫಲಾನುಭವಿಗಳಿಂದ 20 ಸಾವಿರ ಹಣವನ್ನು ಕೆವಿಜಿ ಬ್ಯಾಂಕ್ ಮೂಲಕ ಪುರಸಭೆ ಕಚೇರಿಗೆ ಹಣ ಕಟ್ಟಿಸಿಕೊಂಡು ಸುಮಾರು 5 ವರ್ಷ ಗತಿಸಿದರು ಈ ವರೆಗೂ ಯಾವದೇ ಪ್ರಯೋಜನವಾಗಿಲ್ಲ. ವಸತಿ ಯೋಜನೆಯ ಅಧ್ಯಕ್ಷರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಕಾರ್ಯ ಪ್ರವೃತ್ತರಾಗಿ ಸೂರಿಲ್ಲದ ನಿರ್ಗತಿಕರಿಗೆ ವಸತಿ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
40 ದಿನಗಳ ಒಳಗಾಗಿ ವಸತಿ ಯೋಜನೆಯಡಿ ಮನೆಗಳನ್ನು ವಿತರಿಸದಿದ್ದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಕಂದಾಯ ಇಲಾಖೆಯ ಎದುರಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಪರಶುರಾಮ ಈಳಗೇರ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮುನ್ನಾ ಗೌಡಗೇರಿ, ಪದಾಧಿಕಾರಿಗಳಾದ ಚಿತ್ಲಮ್ಮ ಶಿಗ್ಲಿ, ಮಾಲತೇಶ ಗೌಡಗೇರಿ, ಜಗದೀಶ ಹಾಲಗಿ, ನಾಗರಾಜ ಹರಿಜನ, ರೇಷ್ಮಾ ಜವಳಿ, ಮಂಜುಳಾ ಹೊಸಳ್ಳಿ ಜರಿನಾ ಮುಲ್ಲಾ, ಅಲ್ಲಾವುದೀನ್ ಕಿಸ್ಮತಗಾರ, ಖಾಸಿಂಸಾಬ್ ಬೇಪಾರಿ ಹಾಗೂ ಇತರರು ಇದ್ದರು.