ಕಾಮಗಾರಿ ವೀಕ್ಷಣೆ

(ಸಂಜೆವಾಣಿ ವಾರ್ತೆ)
ನವಲಗುಂದ,ಸೆ24 : ಚಕ್ಕಡಿ ದಾರಿಗಳನ್ನು ಅಗಲೀಕರಣ ಮಾಡಿ ಹೆದ್ದಾರಿ ತರಹ ರಸ್ತೆ ಮಾಡಿದ ಕೀರ್ತಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರಿಗೆ ಸಲ್ಲುತ್ತದೆ ಅಲ್ಲದೇ ರೈತರ “ನಮ್ಮ ಹೊಲ ನಮ್ಮ ದಾರಿ” ಯೋಜನೆ ಜಾರಿಗೆ ಇವರೇ ಕಾರಣೀಕರ್ತರು ಎಂದು ಹಿರಿಯ ಸಹಕಾರಿ ಧುರೀಣ, ಗದಗ ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.

ಅವರು ನವಲಗುಂದ ತಾಲ್ಲೂಕಿನ ಪಡೆಸೂರ ತಿರ್ಲಾಪೂರ ಅಂದಾಜು 10 ಕಿ.ಮೀ. ಚಕ್ಕಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಸಣ್ಣ ಇದ್ದ ರಸ್ತೆಯನ್ನು ಹೆದ್ದಾರಿ ತರಹ ನಿರ್ಮಿಸಿ ರೂಲರ್ನಿಂದ ಗಟ್ಟಿಗೊಳಿಸಿ ಮೊರಂ ಹಾಕಿ ಅಭಿವೃದ್ಧಿಪಡಿಸಿದ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿ, 2013-18 ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಹೆಚ್.ಕೆ ಪಾಟೀಲ ಅವರ ಸಹಕಾರದಿಂದ ಇಬ್ಬರು ಶಾಸಕರು ಚಕ್ಕಡಿ ರಸ್ತೆ ಮಾಡಿದ್ದರಿಂದಲೇ ಇಡೀ ರಾಜ್ಯಕ್ಕೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿಯಾಯಿತು ಎಂದರು.

ಈ ಸಂದರ್ಭದಲ್ಲಿ ಡಾ: ನಾಗನೂರ, ಎಂ.ಎಸ್. ರೋಣದ, ಪರಮೇಶ ಹೊಸವಾಳ, ಹೇಮಣ್ಣ ಕುರ್ಲಗೇರಿ, ಸಂಜೀವ ನವಲಗುಂದ, ವಾಯ್.ಎಸ್. ಪಾಟೀಲ, ರಾಜು ಮಂಕಣಿ, ರಾಜು ಹಳ್ಯಾಳ ಹಾಗೂ ಮುಂತಾದವರು ಉಪಸ್ಥಿತರಿದ್ದರು.