ಕಾಮಗಾರಿ ವಿಳಂಬ ಅಧಿಕಾರಿಗಳಿಗೆ ತೀವ್ರ ತರಾಟೆಗೆ

ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಟ್ಟು ನಿಟ್ಟಿನ ಸೂಚನೆ
ರಾಯಚೂರು, ನ.೨೧- ಅಂಗನವಾಡಿ, ಪಂಚಾಯತ್ ಕಟ್ಟಡ ಕಾರ್ಯಾಲಯ ಸೇರಿದಂತೆ ಇತರೇ ಕಾಮಗಾರಿಗಳು ವಿಳಂಬ ಖಂಡಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಶಶಿದರ್ ಕರೇರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ೨೦೨೧-೨೨ ಸಾಲಿನ ಬಾಕಿ ಉಳಿದ ಕಾಮಗಾರಿಗಳ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೨೦೨೧-೨೨ ಸಾಲಿನ ಕಾಮಗಾರಿಗಳು ಅಪೂರ್ಣಗೊಂಡಿದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಿರವಾರ, ಲಿಂಗಸೂಗೂರು, ದೇವದುರ್ಗ ಮತ್ತು ಸಿಂಧನೂರು ಸೇರಿದಂತೆ ಇತರೇ ಗ್ರಾಮ ಪಂಚಾಯತಗಳಲ್ಲಿ ಅಂಗನವಾಡಿ, ವಸತಿ ಮನೆಗಳು ಹಾಗೂ ನರೇಗಾ ಯೋಜನೆಗಳ ಸೇರಿದಂತೆ ಇತರೇ ಕಾಮಗಾರಿಗಳು ವಿಳಂಬವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಕಾಮಗಾರಿ ಅಪೂರ್ಣಗೊಳ್ಳುವದಕ್ಕೆ ಕಾರಣವೇನು ಎಂದು ಅಧಿಕಾರಿಯನ್ನು ಕೇಳಿದಾಗ ಸರಿಯಾಗಿ ಮಾಹಿತಿ ನೀಡದೇ ಹೋದ ಕಾರಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಪೂರ್ಣಗೊಂಡ ಕಾಮಗಾರಿಗಳಿಗೆ ಹಣ ಬಿಡುಗಡೆ ವಿಳಂಬ ಮಾಡುವುದು ನ್ಯಾಯ ಸಮ್ಮತವಲ್ಲ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಜಿಲ್ಲೆಯಲ್ಲಿ ೧೮೩೬೭ ಕಾಮಗಾರಿಗಳು ಬಾಕಿ ಇದ್ದು
ನವೆಂಬರ್ ತಿಂಗಳು ಒಳಗಡೆ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಹಾಗೂ ಅಧಿಕಾರಿಗಳು ಇದ್ದರು.