ಕಾಮಗಾರಿ ಮುಗಿದ ತಕ್ಷಣ
ರಸ್ತೆ ಅಭಿವೃದ್ಧಿ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.17: ಕುಡಿಯುವ ನೀರನ್ನು ನಗರದ ಜನತೆಗೆ ಸಮರ್ಪಕವಾಗಿ ಒದಗಿಸಲು ನಗರದ ಗಾಂಧಿನಗರದ ಸಂಗನಕಲ್ಲು ರಸ್ತೆಯಲ್ಲಿ ನಕ್ಷತ್ರ ಹೊಟೇಲ್ ಮುಂಭಾಗದಿಂದ ದುರ್ಗಮ್ಮ ದೇವಸ್ಥಾನದವರೆಗೆ ಬೃಹತ್ ಎಂ.ಎಸ್.ಪೈಪ್ ಲೈಲ್ ಅಳವಡಿಸುವ ಕಾಮಗಾರಿ ಆರಂಭಗೊಂಡಿದೆ.
ಈ ಕಾಮಗಾರಿಯನ್ನು ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಈ ಕಾಮಗಾರಿ ಮುಗಿದ ತಕ್ಷಣ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದರುವ ಸಂಗನಕಲ್ಲು ರಸ್ಥೆಯ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆಂದು ತಿಳಿಸಿದರು.
ಪಾಲಿಕೆಯ ಆಯುಕ್ತ ರುದ್ರೇಶ್,   ಮುಖ್ಯ ಇಂಜಿನೀಯರ್ ಖಾಜಾ ಮೈನುದ್ದೀನ್, ಸದಸ್ಯ ಶ್ರೀನಿವಾಸ್ ಮೋತ್ಕರ್ ಮಾಜಿ ಸದಸ್ಯ ಎಸ್.ಮಲ್ಲನಗೌಡ ಮೊದಲಾದವರು ಇದ್ದರು.

Attachments area