ಕಾಮಗಾರಿ ಮರುದುರಸ್ತಿಗೆ ಆಗ್ರಹ

ಚಿಂಚೋಳಿ ಸೆ 24: ರಟಕಲ್ ಗ್ರಾಮದಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲಿ ್ಲ ಕೈಗೊಂಡ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ ಎಂದು ರಟಕಲ್ ಗ್ರಾಮದ ಪರಿವರ್ತನ ಫೌಂಡೇಶನ ಅಧ್ಯಕ್ಷ ಶೇಖರ್ ಕಂಠಿ ಮತ್ತು ಮುಖಂಡ ವಿಶಾಲ್ ಹಂದ್ರೊಳ್ಳಿ ಆರೋಪಿಸಿದ್ದಾರೆ.
ಇನ್ನೊಮ್ಮೆ ಕಾಮಗಾರಿಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.ಇಲ್ಲದಿದ್ದಲ್ಲಿ ಮುಂದಿನ ಒಂದು ವಾರದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದ್ದಾರೆ.