ಕಾಮಗಾರಿ ಭೂಮಿ ಪೂಜೆ -ಶಾಸಕ ನಾಡಗೌಡ

ಸಿಂಧನೂರು.ಜು.೨೫- ಶಾಸಕ ವೆಂಕಟರಾವ ನಾಡಗೌಡರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ವಾಸಿಸುವ ಪ.ಜಾತಿ, ಪ.ಪಂಗಡದ ಜನರ ಕಾಲೋನಿಯಗಳಲ್ಲಿ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಯೋಜನೆಯ ಕಾಯ್ದೆ ೨೦೧೩ ಬಳಕೆಯಾಗದೆ ಇರುವ ಅನುದಾನವನ್ನು ಉಪಯೋಗಿಸಿ ಸಿಸಿ ರಸ್ತೆ ಹಾಗು ಚರಂಡಿ ಕಾಮಗಾರಿಗಳಿಗೆ ಭೂಮಿ ಫೂಜೆ ನೆರವೇರಿಸಿದರು.
ತಾಲ್ಲೂಕಿನ ಬೆಳಗುರ್ಕಿ ಗ್ರಾಮದ ಎಸ್.ಟಿ ಕಾಲೊನಿಯಲ್ಲಿ ೫೦ ಲಕ್ಷ ರೂ.ಗಳ ವೆಚ್ಚದಲ್ಲಿ.ಸಿಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಸಾಸಲಮರಿ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ೬೦.ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆಯ ಮತ್ತು ಚರಂಡಿ ಕಾಮಗಾರಿಗೆ ಶಾಸಕ ವೆಂಕಟರಾವ ನಾಡಗೌಡ ಭೂಮಿ ಪೂಜೆ ಮಾಡಿದರು.
ತಾಲ್ಲೂಕಿನ ಗೊಬ್ಬರಕಲ್ ಗ್ರಾಮದ ಎಸ್.ಟಿ ಕಾಲೊನಿಯಲ್ಲಿ ೪೦.ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಹಾಗು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ನೆರವೇರಿಸಿ ಮಾತನಾಡಿದ ಶಾಸಕ ನಾಡಗೌಡರು ಈ ಎಲ್ಲ ಕಾಮಗಾರಿಗಳು ಕೆ.ಆರ್ ಐ.ಡಿ ಅಡಿಯಲ್ಲಿ ಮಾಡಲಾಗುತ್ತಿದ್ದು ಅಧಿಕಾರಿಗಳು ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕು ಗ್ರಾಮಸ್ಥರು ಸ್ಥಳದಲ್ಲಿ ಹಾಜರಿದ್ದು ಕಳಪೆ ಯಾಗದಂತೆ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳ ಬೇಕು ಎಂದು ಶಾಸಕ ವೆಂಕಟರಾವ ನಾಡಗೌಡ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ರಾಜ್ಯ ಕ್ರಷಿ ಬೆಲೆ ಆಯೋಗದ ಅಧ್ಯಕ್ಷರಾದ ಹನಮನಗೌಡ ಬೆಳಗುರ್ಕಿ ಜೆಡಿಎಸ ಪಕ್ಷ ಹಾಗು ಗ್ರಾಮದ ಮುಖಂಡರಾದ ಭೀಮಣ್ಣ, ನಿಂಗಪ್ಪ, ಚನ್ನಬಸವ, ಶಿವಣ್ಣ, ರಮೇಶ, ಸೀತಾರಾಮ ರೆಡ್ಡಿ, ನಿರುಪಾದಿ, ನಾಗರಾಜ, ಹೂಡಾ, ಬಸನಗೌಡ ಕಾಳಿಂಗಪ್ಪ ರೆಡ್ಡಿ, ಮುದುಕಪ್ಪ, ಶಂಕರ ಗೌಡ, ರಂಗನಗೌಡ, ಬಸಪ್ಪ ರಂಗಾರೆಡ್ಡಿ, ಆದನಗೌಡ, ಭುಸೇನಾ ನಿಗಮದ ಜೆ.ಇ.ಸಂತೋಷ ಸೇರಿದಂತೆ ಇತರರು ಹಾಜರಿದ್ದರು.