ಕಾಮಗಾರಿ ಪರಿಶೀಲನೆ


ಮುಂಡಗೋಡ,ಎ.20: ತಾಲೂಕಿನ ಚಿಗಳ್ಳಿಯ ಡ್ಯಾಂ ನಿರ್ಮಾಣದ ಕಾಮಗಾರಿ ಮತ್ತು ಕವಲಗಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಸೋಮವಾರ ಸಂಜೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಭೇಟಿ ನೀಡಿ ಪರಿಶೀಲಿಸಿದರು.
ಮೊದಲಿಗೆ ಚಿಗಳ್ಳಿಯ ಡ್ಯಾಂ ಕಾಮಗಾರಿಯನ್ನು ವೀಕ್ಷಿಸಿ ನಂತರ ತಾಲೂಕಿನ ಕವಲಗಿ ಹಳ್ಳದಲ್ಲ್ಲಿ ನಡೆಯುತ್ತಿರುವ ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿಯನ್ನು ಪರಿಶೀಲಿಸಿದರು. ತದನಂತರ ಅಧಿಕಾರಿಗಳ ಸಭೆ ನಡೆಸಿ ಕೆರೆ ನೀರು ತುಂಬಿಸುವ ಯೊಜನೆ ಕಾಮಗಾರಿಯು ಮಹತ್ವ ಪೂರ್ಣದಾಗಿದ್ದು ಈ ಯೋಜನೆÀಯ ವ್ಯಾಪ್ತಿಗೆ ಬರುವ ಕೆರೆ ಸರ್ವೆಯಲ್ಲಿ ಯಾವ ಗ್ರಾಮದ ಒಂದು ಕೆರೆಯು ತಪ್ಪಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಧಿಕಾರಗಳಿಂದ ಪೂರ್ಣ ಮಾಹಿತಿ ಪಡೆದರು.
ಈ ವೇಳೆ ಜಿ.ಪಂ ಸದಸ್ಯರಾದ ಎಲ್.ಟಿ ಪಾಟೀಲ, ರವಿಗೌಡ ಪಾಟೀಲ ಮುಖಂಡರಾದ ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ ತಹಶೀಲ್ದಾರ ಶ್ರೀಧರ ಮುಂದಲಮನಿ, ದೇವು ಪಾಟೀಲ, ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾಗಳು ಇದ್ದರು.