ಕಾಮಗಾರಿ ನಿಧಾನ ಚರಂಡಿ ನೀರು ಮನೆಗಳಿಗೆ


ಸಂಜೆವಾಣಿ ವಾರ್ತೆ
ಸಂಡೂರು:ಮೇ: 30:   ನಿಧನವಾದ ಚರಂಡಿ ರಸ್ತೆ ನಿರ್ಮಾಣ ಕಾಮಗಾರಿ, ಮನೆಗಳಿಗೆ ನುಗ್ಗುತ್ತಿರುವ ಚರಂಡಿ ನೀರು, ಕಳೆದ 1 ತಿಂಗಳಿಂದ ಕುಡಿಯಲು ನೀರಿಲ್ಲದಂತಹ ದುಸ್ಥಿತಿಯನ್ನು ಅನುಭವಿಸುತ್ತಿರುವ ಸುಭಾಷ್‍ನಗರದ ಮಸೀದಿ ರಸ್ತೆಯ ಸಾರ್ವಜನಿಕರು.
ಪಟ್ಟಣದ 16-17 ನೇ ವಾರ್ಡನಲ್ಲಿ ಬರುವ ಶ್ರೀವರದಾಂಜಿನೇಯ ಸ್ವಾಮಿ ಹಾಗೂ ಉಮರ್ ಮಸೀದಿ ಪಕ್ಕದಲ್ಲಿಯ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ 5 ತಿಂಗಳು ಕಳೆದರೂ ಸಹ ಕಾಮಗಾರಿ ಪೂರ್ಣವಾಗಿಲ್ಲ, ಚರಂಡಿ ನಿರ್ಮಾಣಕ್ಕೆ ತೆಗೆದ ಗುಂಡಿಯಿಂದ ಓಣಿಯ ಎಲ್ಲಾ ಹೊಲಸು ನೀರು ಮಳೆ ಬಂದ ಪರಿಣಾಮ ಮನೆಗಳಿಗೆ ನುಗ್ಗಿದ್ದು ಮನೆಗಳಲ್ಲಿ ಸಾರ್ವಜನಿಕರು ವಿಪರೀತ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಪ್ರಮುಖವಾಗಿ ಗುತ್ತಿಗೆದಾರರ ನಿಧಾನಗತಿ ಹಾಗೂ ಬಿಲ್ ಪಾವತಿಯಾಗದೇ ಇರುವುದು ಎನ್ನುವುದು ಕಾಮಗಾರಿ ಮಾಡುವ ಕೆಲಸಗಾರರು ತಿಳಿಸುತ್ತಿದ್ದಾರೆ,.
ಕಳೆದ 2 ತಿಂಗಳಿಂದ ಕಾಮಗಾರಿ ಅರ್ಧಕ್ಕೆ ನಿಂತು ಪರಿಣಾಮ 100ಕ್ಕೂ ಹೆಚ್ಚು ಮನೆಗಳಿಗೆ ಹೋಗಿದ್ದ ಕುಡಿಯುವ ನೀರಿನ ಪೈಪ್ ಸಹ ಕಾಲುವೆ ತೋಡುವಾಗ ಕಟ್ಟಾಗಿದ್ದು ನೀರು ಸಹ ಇಲ್ಲದಂತಾಗಿದೆ, ಒಂದು ಕಡೆ ಚರಂಡಿ ನೀರು ಮನೆಗಳಲ್ಲಿ ಬಸಿಯುತ್ತಿರುವುದು ಮತ್ತೊಂದು ಕಡೆ ಕುಡಿಯಲು ನೀರು ಇಲ್ಲದಂತಾಗಿದ್ದು ಸಾರ್ವಜನಿಕರು ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ.
ಚರಂಡಿಯ ನೀರು ಅಷ್ಟಕ್ಕೆ ನಿಲ್ಲದೇ ಮಸೀದಿಯ ಗೋಡೆಗೂ ಸಹ ತಗುಲ್ಲಿದ್ದು ಗೋಡೆಯು ಸಹ ಅಪಾಯಕ್ಕೆ ಸಿಲುಕುತ್ತಿದೆ, ಕಾಲುವೆ ಮಧ್ಯದಲ್ಲಿರುವ ವಿದ್ಯುತ್ ಕಂಬ ಯಾವ ಸಂದರ್ಭದಲ್ಲಾದರೂ ಬೀಳಬಹುದು ಕಾರಣ ಅದೂ ಸಹ ಚರಂಡಿಯಲ್ಲಿರುವುದರಿಎರಡೂ ಕಡೆ ತಾತ್ಕಾಲಿಕ ಭದ್ರತೆ ಒದಗಿಸಿದ್ದು ಅದು ಅಪಾಯ ಉಂಟುಮಾಡಬಹುದು ಎನ್ನುವ ಭಯವೂ ಸಹ ಸಾರ್ವಜನಿಕರಲ್ಲಿ ಉಂಟಾಗಿದ್ದು ವಾರ್ಡನ ಸದಸ್ಯರನ್ನು, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ವಾರ್ಡನ ಜನತೆ ಈಗಾಗಲೇ ಪುರಸಭೆಯ ಅಧಿಕಾರಿಗಳಿಗೆ ನೇರವಾಗಿ ಭೇಟಿನೀಡಿ ಸಮಸ್ಯೆಯನ್ನು ತಿಳಿಸಿದ್ದಾರೆ, ಗುತ್ತಿಗೆ ಕಾಮಗಾರಿ ಪಿ.ಡಬ್ಲ್ಯೂ.ಡಿ. ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ಕಾಮಗಾರಿ ನಿಧಾನವಾಗುತ್ತಿದೆ ಎನ್ನುತ್ತಿದ್ದಾರೆ. ಇನ್ನೂ ಪಿ.ಡಬ್ಲ್ಯೂಡಿ ಅಧಿಕಾರಿ ಕೃಷ್ಣಾನಾಯಕ ಅವರನ್ನು ಸಂಪರ್ಕಿಸಿದಾಗ ಸ್ಥಳಕ್ಕೆ ಇಡೀ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ಮಾಡಿದ್ದೇವೆ ಅಪಾಯ ಉಂಟಾಗುವ ಬಗ್ಗೆ ಪರಿಶೀಲಿಸಿದ್ದೇವೆ, ಗುತ್ತಿಗೆದಾರರಿಗೆ ನಿಗದಿತ ಸಮಯವನ್ನು ನೀಡಿದ್ದೇವೆ, ಅದರೊಳಗೆ ಮುಗಿಸುವ ಪೂರ್ಣ ಭರವಸೆ ನೀಡಿದ್ದಾರೆ, ಒಂದು ವೇಳೆ ಕಾಮಗಾರಿ ಅಗದೇ ಇದಲ್ಲಿ ಮುಂದಿನ ಕ್ರಮವಹಿಸಲಾಗುವುದು ಎಂದರು.
ಸ್ಥಳಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಇಡೀ ವಾರ್ಡನ ಜನರು ಹಿಗ್ಗಾ ಮುಗ್ಗಾ ಬೈಯುವ ಮೂಲಕ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಇನ್ನಾದರೂ ಶೀಘ್ರ ಚರಂಡಿ ಮತ್ತು ರಸ್ತೆಯನ್ನು ಮಾಡುವರೇ ಎಂದು ಕಾದು ಕುಳಿತಿರುವ ಸಾರ್ವಜನಿಕರಿಗೆ ಅಧಿಕಾರಿಗಳು ಭರವಸೆ ನೀಡಿದ್ದು ಅದು ಭರವಸೆಯಾಗಲಾರದು ಎನ್ನುವ ನಂಬಿಕೆಯಿಂದ ಶೀಘ್ರ ಕಾಮಗಾರಿಯಾಗಲಿ ಎನ್ನುತ್ತಿದ್ದಾರೆ