ಸಿಂಧನೂರು. ಜೂ೨೬ ಸರ್ಕಾರದ ಯಾವದೆ ಆದೇಶ ಇಲ್ಲದೆ ವಿನಾಕಾರಣ ಅಬಿವೃದ್ಧಿ ಕಾಮಗಾರಿಗಳನ್ನು ಶಾಸಕ ಹಂಪನಗೌಡ ಬಾದರ್ಲಿ ನಿಲ್ಲಿಸಿದ್ದು ಯಾಕೆ ಎಂದು ತಿಳಿಯುತ್ತಿಲ್ಲ ಕೆಲಸ ನಿಂತ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬುದು ಅವರಿಗೆ ಯಾಕೆ ಅರ್ಥ ವಾಗುತ್ತಿಲ್ಲ ಎಂದು ಮಾಜಿ ಶಾಸಕ ವೆಂಟರಾವ ನಾಡಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ತಮ್ಮ ನಿವಾಸದದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಅವದಿಯಲ್ಲಿ ಚಾಲನೆ ನೀಡಿದ ಕೆಲಸಗಳನ್ನು ನಿಲ್ಲಿಸಲಾಗಿದೆ ಯಾಕೆ ಎಂದು ಅಧಿಕಾರಿಗಳನ್ನು ಕೇಳಿದರೆ ಶಾಸಕರು ಹೇಳಿದ್ದಾರೆ ನಿಲ್ಲಿಸಲಾಗಿದೆ ಎಂದು ಹೇಳುತ್ತಿದ್ದು ಕಾಮಗಾರಿ ಬಿಲ್ ತಡೆ ಹಿಡಿಯುವಂತೆ ಸರ್ಕಾರ ಹೇಳಿದ್ದು ಎಲ್ಲೂ ನಡೆಯುವ ಕೆಲಸಗಳನ್ನು ಬಂದ ಮಾಡುವಂತೆ ಆದೇಶ ಮಾಡಿಲ್ಲ ಆದೇಶ ಮಾಡಿದ್ದರೆ ತೋರಿಸಲಿ ಎಂದರು.
ನಾನು ಶಾಸಕನಾದ ಮೇಲೆ ಅವರ ಅವಧಿಯ ಕೆಲಸಗಳನ್ನು ತಡೆಹಿಡಿದಿಲ್ಲ ಅವರು ಸಹ ನನ್ನ ಅವದಿಯಲ್ಲಿ ನಡೆದ ಕೆಲಸ ಗಳು ಕಳಪೆಯಾಗಿದ್ದರೆ ತನಿಖೆ ಮಾಡಲಿ ಆದರೆ ಎಲ್ಲ ಕೆಲಸಗಳನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಹೇಳುವದು ಎಷ್ಷು ಸರಿ ಎಂದ ಅವರು ಅಧಿಕಾರಿಗಳು ಕೂಡಲೆ ಕೆಲಸ ಗಳನ್ನು ಮೂಡಿಸಬೇಕು ಎಂದರು.
ಚುನಾವಣೆ ಮುಗಿದು ಒಂದೂವರೆ ತಿಂಗಳಾಗಿದೆ ಈಗಾಗಲೆ ಎಲ್ಲಾ ಗುತ್ತಿಗೆದಾರರನ್ನು ಕರೆದು ಕೆಲಸ ನಿಲ್ಲಿಸುವಂತೆ ಒತ್ತಡ ಹಾಕುವ ಉದ್ದೇಶ ನೋಡಿದರೆ ಕಮೀಷನ ಕೇಳುತ್ತಾರೆ ಎನ್ನುವದು ಗೊತ್ತಾಗುತ್ತಿದೆ ಶಾಸಕರ ಮನೆಯ ಮಿನಿ ಶಾಸಕರುಗಳು ಈಗಾಗಲೆ ೫,೧೦ , ಪರ್ಷಂಟೇಜ್ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ ಮುಂದೆ ಇದೆ ರೀತಿ ಯಾದರೆ ಇವರ ಕಮೀಷನ ಬಗ್ಗೆ ನಾನೆ ಬಹಿರಂಗ ಪಡಿಸುಬೇಕಾಗುತ್ತೆದೆ ನನ್ನ ವಿರುದ್ಧ ಕಮೀಷನ ಆರೋಪ ಮಾಡಿದ ಇವರು ಈಗ ಇವರೇನು ಮಾಡುತ್ತಿದ್ದಾರೆ ಎಂದು ಹಂಪನಗೌಡರನ್ನು ನಾಡಗೌಡರು ಪಶ್ನೀಸಿದರು.
ಮಳೆ ಗಾಲ ಇರುವುದರಿಂದ ನಿಂತ ಕೆಲಸ ಗಳನ್ನು ಮಾಡಬೇಕು ಇಲ್ಲದಿದ್ದರೆ ಮಳೆ ಬಂದರೆ ಜನ ಒಡಾಡಲು ತೊಂದರೆಯಾಗುತ್ತಿದೆ ಇದನ್ನು ಅರ್ಥ ಮಾಡಿಕೊಂಡರು ಶಾಸಕರು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಬೇಕು ಇಲ್ಲದಿದ್ದರೆ ನಾನು ಬೀದೀಳೀದು ಹೋರಾಟ ಮಾಡುವೆ ಅಲ್ಲದೆ ನಮ್ಮ ನಾಯಕರು ಸದನದಲ್ಲಿ ಸರ್ಕಾರದ ಗಮನ ಸೆಳೆಯುವ ವರು ಎಂದರು.
ಜೆಡಿಎಸ್ ಪಕ್ಷದ ಮುಖಂಡರಾದ ಅಶೋಕ ಗೌಡ ನದಿ ಮೂಲ್ಲಾ ಧರ್ಮನಗೌಡ ಮಲ್ಕಾಪೂರ, ಚಂದ್ರಶೇಖರ ಮೈಲಾರ ಜಿಲಾನಿ ಪಾಷಾ ಸುಮೀತ ತಡಕಲ್, ಅಲ್ಲಮ ಪ್ರಭು ಪೂಜಾರ .