ಕಾಮಗಾರಿ ಚಾಲನೆ

ಗುಳೇದಗುಡ್ಡ,ಮಾ28: ಪಟ್ಟಣದ ವಾರ್ಡ ನಂ.4 ರಲ್ಲಿ ಪುರಸಭೆಯ ಎಸ್.ಎಫ್.ಸಿ ಅನುದಾನ ರೂ,1.50 ಲಕ್ಷ ವೆಚ್ಚದಲ್ಲಿ ಲಾಳವರ ಮನೆಯಿಂದ ರಾಠಿಯವರ ಅಂಗಡಿ ವರೆಗೆ ಪೆವರ್ ಜೋಡಣೆ ಕಾಮಗಾರಿಗೆ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಶುಕ್ರವಾರ ಚಾಲನೆ ನೀಡಿದರು.
ಶಾಸಕರ ಸೂಚನೆ ಮೇರೆಗೆ ಪೆವರ್ ಜೋಡಣೆ ಕಾಮಗಾರಿ ಪ್ರಾರಂಭಿಸಿದ್ದು, ಗುಣಮಟ್ಟದಿಂದ ಕೂಡಿರಬೇಕು. ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣ ಗೊಳ್ಳುವಂತಾಗಬೇಕು ಎಂದು ಹೇಳಿದರು.
ಮುಖಂಡ ಸಂಜಯ್ ಬರಗುಂಡಿ, ಪುರಸಭೆ ಸದಸ್ಯ ವಿನೋದ ಮದ್ದಾನಿ, ಪುರುಷೋತ್ತಮ ಝಂವರ, ಸತ್ಯನಾರಾಯಣ ರಾಠಿ, ಪ್ರಭು ತಟ್ಟಿಮಠ, ಮುತ್ತಣ್ಣ ಲಗಳಿ, ಮಹಾದೇವಪ್ಪ ಗುಡದಾರಿ, ಮಹಾಗುಂಡಪ್ಪ ದಂಡಿನ, ಸಾಗರ ಕೊಣ್ಣೂರ, ಶೇಖರಪ್ಪ ಕಲಬುರ್ಗಿ, ಕಾಶೀನಾಥ ಲಾಳ, ಗುತ್ತಿಗೆದಾರ ದಾಮೋದರ ಮಾಲಪಾಣಿ ಇತರರು ಇದ್ದರು.