ಕಾಮಗಾರಿ ಗುಣ ಮಟ್ಟದಿಂದ ನಡೆಯಲಿ

ಆಳಂದ:ಎ.8:ಈಗ ಬೇಸಿಗೆ ಕಾಲ ಆರಂಭವಾಗಿದ್ದು ಕಾಮಗಾರಿ ತ್ವರಿತ ನಡೆಯಲಿ ಮತ್ತು ಗುಣಮಟ್ಟದಿಂದ ನಡೆಯಲಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೇಶ ಸಾಸಿ ಸಲಹೆ ನೀಡಿದರು.
ತಾಲ್ಲೂಕಿನ ಜಿಡಗಾ ಗ್ರಾಮ ಪಂಚಾಯತನಲ್ಲಿ ನಡೆಯುತ್ತಿರುವ ನೀರಿನ ಟ್ಯಾಂಕ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಈಗ ಬೇಸಿಗೆ ಕಾಲ ನಡೆದಿದೆ ಕುಡಿಯುವುದಕ್ಕೆ ನೀರು ಬೇಕಾಗುತ್ತದೆ. ಹೆಚ್ಚು ನೀರು ಸಂಗ್ರಹವಾದರೆ ಜನರಿಗೆ ಕುಡಿಯುವದಕ್ಕೆ ನೀರಿನ ಅನುಕೂಲವಾಗುತ್ತದೆ. ನಡೆಯುತ್ತಿರುವ ಕಾಮಗಾರಿ ಆದಷ್ಟು ಬೇಗೆ ಮುಗಿಸಿ ಎಂದು ಹೇಳಿದರು. ಜೊತೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ನಾಗಮೂರ್ತಿ ಶೀಲವಂತ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.