ಕಾಮಗಾರಿ ಗುಣಮಟ್ಟದಲ್ಲಿ ರಾಜೀ ಬೇಡ

ಮಾಲೂರು, ಡಿ. ೩:ತಾಲ್ಲೂಕಿನಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಪಾಡಿಕೊಂಡು ಗುಣಮಟ್ಟದಲ್ಲಿ ರಾಜೀ ಆಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಕೆ ವೈ ನಂಜೇಗೌಡ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಚಿಕ್ಕ ಕುಂತೂರು ಗ್ರಾಮದಿಂದ ಚಾಕನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಗೆ ಹದಿನೈದು ಲಕ್ಷ ರೂಗಳ ವೆಚ್ಚದಲ್ಲಿ ಶಾಸಕರ ಅನುದಾನ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ಶಾಸಕ ಕೆ ವೈ ನಂಜೇಗೌಡ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು,
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನೂರು ದಿನಗಳು ಮಾತ್ರ ಪೂರೈಸಿದ್ದು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಕೋಟ್ಯಂತರ ಮಂದಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ವಿರೋಧ ಪಕ್ಷದವರು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಟೀಕಿಸುತ್ತಾರೆ, ವಿರೋಧ ಪಕ್ಷದವರಿಗೆ ಇನ್ನೂ ನಾಲ್ಕು ವರ್ಷದಲ್ಲಿ ಅಭಿವೃದ್ಧಿ ಏನೆಂದು ಮಾಡಿ ತೋರಿಸುತ್ತೇವೆ ತಾಲ್ಲೂಕಿನಲ್ಲಿ ನಡೆಯುವಂತ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗುಣಮಟ್ಟದಲ್ಲಿ ಯಾವುದೇ ರಾಜೀ ಆಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸಾವಿತ್ರಿ ವೆಂಕಟಸ್ವಾಮಿ, ಸದಸ್ಯ ವೆಂಕಟೇಶಪ್ಪ, ಜಿ.ಪಂ.ಸಹಾಯಕ ನಿರ್ದೇಶಕ ಜಿ.ನಾರಾಯಣಸ್ವಾಮಿ, ಪಿಡಿಒ ಆನಂದ್, ಮುಖಂಡರಾದ ನಾಗರಾಜ್ ರೆಡ್ಡಿ, ದೊಡ್ಡಮಲ್ಲೆ ರವೀಂದ್ರ, ದಿನಕರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ವಿ.ರೆಡ್ಡಿ,ಮುನಿನಾಯಣಪ್ಪ, ಪಿ ಕೃಷ್ಣಪ್ಪ, ರವಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.