ಕಾಮಗಾರಿ ಕಳಪೆ: ಬಿಲ್ ತಡೆಗೆ ಆಗ್ರಹ

ರಾಯಚೂರು,ಜೂ.೨೯-
ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಕೈಗೊಂಡಿರುವ ಮರಂ ರಸ್ತೆ ಕಾಮಗಾರಿ ತೀರ ಕಳಪೆಯಾಗಿದ್ದು ಕಾಮಗಾರಿ ಬಿಲ್ ತಡೆ ಹಿಡಿಯುವಂತೆ ಮೂಲ ನಿವಾಸಿ ಅಂಬೇಡ್ಕರ್ ಜಿಲ್ಲಾ ಸಮತಿ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಮಲಾಪುರ ಗ್ರಾಮದ ಬಸಣ್ಣ ಮನೆಯಿಂದ ನರಸಪ್ಪ ಮನೆಯವರೆಗೆ ಮರಂ ರಸ್ತೆ ನಿರ್ಮಾಣ, ಶಾಲಂ ಮನೆಯಿಂದ ವಸಂತಮ್ಮ ಮನೆಯ ವರಿಗೆ ಮೊರಂ ರಸ್ತೆ ನಿರ್ಮಾಣ, ಅಗಸರ ನರಸಿಂಹ ಮನೆಯಿಂದ ಹಡಪದ ವೀರಭದ್ರಪ್ಪ ಮನೆಯ ವರಿಗೆ ಮರಂ ರಸ್ತೆ ನಿರ್ಮಾಣತೀರಾ ಕಳಪೆಯಾಗಿದೆ ಎಂದು ದೂರಿದರು.
ಗೋನವಾರ ಗ್ರಾಮದಲ್ಲಿ ಡಿಸ್ಟ್ರಿಬೂಟರ್ ರವೀಂದ್ರ ಹೊಲದವರಿಗೆ ಮರಂ ರಸ್ತೆ, ತುಂಟಪುರ ರೈಸ್ ಮಿಲ್‌ನಿಂದ ಪೆಪ್ಪಿ ಗೋವಿಂದ ಹೊಲದವರೆಗೆ ಮರಂ ರಸ್ತೆ ನಿರ್ಮಾಣ, ಗ್ರಾಮದ ವ್ಯಾಪ್ತಿಯಲ್ಲಿ ೮ ಕಡೆ ಮರಂ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ಎಲ್ಲಾ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾ ಯತಿ ಅಭಿವೃದ್ಧಿ ಅಧಿಕಾರಿ ವಸಂತಿ ಗೀತಾ ಮತ್ತು ಜೆಇ ಅವರು ಗುತ್ತೇದಾರರ ಜೊತೆ ಶಾಮೀಲಾಗಿ ಕಳಪೆ ಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಎತ್ತುವಳಿಗೆ ಮುಂದಾಗಿದ್ದಾರೆ. ಕೂಡಲೇ ಬಿಲ್ ತಡೆ ಹಿಡಿಯುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಸುನಿಲ್ ಕುಮಾರ, ಮಹಮದ್ ಹಾಜಿ, ವಿರೇಶ, ಫಸಲ್ ಸೇರಿದಂತೆ ಉಪಸ್ಥಿತರಿದ್ದರು.