ಕಾಮಗಾರಿ ಕಳಪೆ: ಕ್ರಮಕ್ಕೆ ಒತ್ತಾಯ

ರಾಯಚೂರು.ಮಾ.೨೦- ತಾಲೂಕಿನ ಕಮಲಾಪೂರು ಗ್ರಾಮದಲ್ಲಿ ಸಿ.ಸಿ. ರಸ್ತೆಯನ್ನು ತೀರಾ ಕಳಪೆ ಮಾಡಿದ್ದು ಕೂಡಲೇ ಗುತ್ತಿಗೆದಾರರ ಹಾಗೂ ಕಿರಿಯ ಅಭಿಯಂತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಮಲಾಪುರ ಗ್ರಾಮಸ್ಥರು ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಯಡಿಯಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣವನ್ನು ಕಮಲಾಪೂರು ಗ್ರಾಮದಲ್ಲಿ ತೀರಾ ಕಳಪೆ ಮಟ್ಟದಿಂದ ಹಾಗೂ ರಸ್ತೆಗೆ ಬಳಸುವ ತೀರಾ ಕಳಪೆಮಟ್ಟದ ಸಾಮಾಗ್ರಿಗಳನ್ನು ಬಳಸಿದ್ದು. ಹಾಗೂ ಅಂದಾಜು ಪತ್ರಿಕೆಯಂತೆ ಅಳತೆಯನ್ನು ಕೂಡ ಕಡಿಮೆ ಮಾಡಿದ್ದಾರೆ ಎಂದು ದೂರಿದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಯಾವುದೇ ಕಾರಣಕ್ಕೆ ಬಿಲ್ಲು ಪಾಸುಮಾಡದೇ ಕೂಡಲೇ ಗುತ್ತಿಗೆದಾರರನ್ನು ಮತ್ತು ಸಂಬಂಧಪಟ್ಟ , ಕಿರಿಯ ಅಭಿಯಂತರ ಚಂದ್ರಶೇಖರ ಇವರನ್ನು ಕೂಡಲೇ ಅಮಾನತು? ಮಾಡಬೇಕೆಂದು? ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ.ವೀರೇಶ್,ಓಂಕಾರ್,ಸೇರಿದಂತೆ ಇತರರು ಇದ್ದರು.