
ಲಕ್ಷ್ಮೇಶ್ವರ,ಮಾ.9:ತಾಲೂಕಿನ ರಾಮಗೇರಿ ಗ್ರಾಮದಿಂದ ಬಸಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4.80.ರಸ್ತೆ ಸುಧಾರಣೆಗೆ ಶಾಸಕ ರಾಮಣ್ಣ ಲಮಾಣಿಯವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ರಾಮಣ್ಣ ಲಮಾಣಿಯವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ಇಲಾಖೆಯ ಪಂಚಾಯತ ರಾಜ್ಯ ಇಂಜಿನಿಯರಿಂಗ್ ಉಪವಿಭಾಗದಿಂದ ಈ ರಸ್ತೆಯನ್ನು 81.66 ಲಕ್ಷ ರೂ.ಗಳ ವೆಚ್ಚದಲ್ಲಿ ಈ ರಸ್ತೆ ಕೈಗೆತ್ತಿಕೊಳ್ಳಲಾಗಿದ್ದು ಈ ರಸ್ತೆ ನಿರ್ಮಾಣದಿಂದ ನೂರಾರು ಎಕರೆ ಜಮೀನಿನಲ್ಲಿನ ಬೆಳೆ ಬೆಳೆದ ರೈತರಿಗೆ ಮಳೆಗಾಲದಲ್ಲಿಯೂ ಸಹ ಉತ್ತಮ ರಸ್ತೆ ಆಗುವುದರಿಂದ ರೈತರಿಗೆ ಈ ರಸ್ತೆ ಸಂಪರ್ಕ ರಸ್ತೆಯಾಗಿ ಅನುಕೂಲ ಆಗಲಿದೆ ಎಂದರು ಇದೇ ಸಂದರ್ಭದಲ್ಲಿ ರೈತರು ಗುತ್ತಿಗೆದಾರರಿಗೆ ಸಹಕಾರ ನೀಡಿ ಗುಣಮಟ್ಟದ ರಸ್ತೆಯಾಗಲು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಚನ್ನಪ್ಪ ಪೂಜಾರ ಚಿದಾನಂದ ಮಲ್ಲೂರ, ಮಲ್ಲೇಶಪ್ಪ ಯಂಗಾಡಿ ನಿಲೇಶಪ್ಪ ಕಾಳೆ ಮೈಲಾರೆಪ್ಪ ಕಾಳೆ ರಾಮನಗೌಡ್ರ ಪಾಟೀಲ, ಫಕ್ಕಿರಪ್ಪ ಕರನಿಂಗಣ್ಣನವರ ರಮೇಶ ಯಡಸಾಲಿ ಗಂಗಾಧರ ಮೆಣಸಿನಕಾಯಿ, ಶಿವಯೋಗಿ ಅಂಕಲಕೋಟಿ, ರುದ್ರಪ್ಪ ಉಮಚಗಿ, ಲಕ್ಷ್ಮಣ ಲಮಾಣಿ ತೀರಕಪ್ಪ ಕಾಗದ ಯಲ್ಲಪ್ಪ ಕಾಳೆ ಭೀಮಪ್ಪ ಯಂಗಾಡಿ,ಶಿವಣ್ಣ ಗೊಂದಿ,ನಿಂಗಪ್ಪ ಬನ್ನಿಕೊಪ್ಪ, ಬಾಬುರಾವ ಜ್ಯೋತಿ ಸಂತೋಷ ಲಮಾಣಿ ಗುತ್ತಿಗೆದಾರ ಡಿ.ಎಂ.ಅಡರಕಟ್ಟಿ ಸಿದ್ದಯ್ಯ ಕಳ್ಳಿಮಟ್ಟ ಇದ್ದರು