
ಶಿರಹಟ್ಟಿ,ಮಾ.12: ಪಟ್ಟಣದ ಎಪಿಎಮ್‍ಸಿ ಆವರಣದಲ್ಲಿ ಎಪಿಎಮ್‍ಸಿ ವತಿಯಿಂದ 10 ಮಳಿಗೆಗಳನ್ನು ನಿರ್ಮಿಸಲು 49.35 ಲಕ್ಷ್ ಅನುದಾನವ ವಿನಿಯೋಗದ ಮೂಲಕ ಕಾಮಗಾರಿಗೆ ಶಾಸಕ ರಾಮಣ್ಣ ಲಮಾಣಿ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ, ಪಟ್ಟಣದ ಸಾಕಷ್ಟು ಅಭಿವೃದ್ದಿಗಾಗಿ ಅನುದಾನವನ್ನು ಒದಗಿಸಲಾಗಿದೆ. ಮುಂದಿನ ದಿನಮಾನದಲ್ಲಿ ಅಬಿವೃದ್ದಿ ಪಡಿಸಲಾಗುವುದು ಎಂದು ಹೇಳಿದರು
ಈ ಸಂದರ್ಬದಲ್ಲಿ ಫಕ್ಕಿರೇಶ ರಟ್ಟಿಹಳ್ಳಿ, ದೀಪು ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ರಾಮಣ್ಣ ಕಂಬಳಿ, ಶ್ರೀನಿವಾಸಬಾರಬಾರ, ಪರಶುರಾಮ ಡೊಂಕಬಳ್ಳಿ, ಅಕ್ಬರ ಯಾದಗೇರಿ, ರಾಜು ಶಿರಹಟ್ಟಿ, ಜಗದೀಶ ತೇಲಿ, ಎಪಿಎಮ್‍ಸಿ ಕಾರ್ಯದರ್ಶಿ ಎ.ಪಿ ಸಂಕದ ಮುಂತಾದವರು ಉಪಸ್ಥಿತರಿದ್ದರು.