ಕಾಮಗಾರಿಗೆ ಭೂಮಿಪೂಜೆ

ಕುಂದಗೋಳ,ಮಾ12 : ನಿಮ್ಮೂರಲ್ಲಿ ಲಕ್ಷಾಂತರ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೆನೆ, ನೀವು ಕೊಟ್ಟ ಮಾತುಗಳಿಗೆ ಘನತೆ ತಂದಿದ್ದೇನೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕುಂದಗೋಳ ಮತಕ್ಷೇತ್ರದ ಸರ್ಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ 48 ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಹಾಗೂ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳೇ ಆಸ್ತಿ ಎಂಬಂತೆ ಬೆಳೆಸಿ, ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ತೆಗೆದಂತಹ ಅಂಕ ನೋಡಿ ನನಗೆ ಖುಷಿಯಾಗಿದೆ ಎಂದರು.
ಬಳಿಕ ಶಾಸಕಿ ಕುಸುಮಾವತಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿದರು.
ಈ ಸಂದರ್ಭದಲ್ಲಿ ಯಲಿವಾಳ ಗ್ರಾಮದ ಮುಖಂಡರಾದ ಎಸ್.ಟಿ.ಹಿರೇಗೌಡ್ರ, ರಾಮು ಮೂಲಗಿ, ಆರ್.ಟಿ.ಹಿರೇಗೌಡ್ರ, ಅಪ್ಪಣ್ಣ ಹಿರೇಗೌಡ್ರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರು ಉಪಸ್ಥಿತರಿದ್ದರು.