
ಕೋಲಾರ, ಮಾ,೧೮- ನಗರೋತ್ಥಾನ ೪ ಯೋಜನೆಯಡಿಯಲ್ಲಿ ೧೭ ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರದ ಗಾಂಧಿವನದ ಸಮೀಪ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್ ಶಂಕುಸ್ಥಾಪನೆ ನೆರವೇರಿಸಿದರು.
ಸುದ್ಧಿಗಾರರೊಂದಿಗೆ ಅವರು ಮಾತನಾಡಿ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್, ನಗರೋತ್ಥಾನಕ್ಕೆ ಬಿಡುಗಡೆ ಆಗಿರುವ ಅನುದಾನ ಯಾವುದಕ್ಕೂ ಸಾಲದಾಗಿದ್ದು, ಸರ್ಕಾರ ಮತ್ತಷ್ಟು ಹೆಚ್ಚಿನ ನಿಧಿಯನ್ನು ಬಿಡುಗಡೆ ಮಾಡಿ ಕೋಲಾರ ನಗರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸುಮಾರು ೧೨ ವರ್ಷದ ಹಿಂದಿನ ಜನಸಂಖ್ಯೆಗೆ ನೀಡಿದ ನಿಧಿ ಇಂದಿನ ಕಾಲಘಟ್ಟಕ್ಕೆ ಸಾಲದಾಗಿದ್ದರಿಂದಾಗಿ ಸರ್ಕಾರ ಮೂಲ ಸೌಲಭ್ಯಕ್ಕಾಗಿ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಒಂದು ವರ್ಷದ ಹಿಂದೆ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದು, ಮೂರು ತಿಂಗಳ ಹಿಂದೆ ಕಾರ್ಯಾದೇಶ ನೀಡಲಾಗಿತ್ತು. ಆದರೂ ಕಾಮಗಾರಿ ಆರಂಭ ವಿಳಂಬ ಆದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಇದೀಗ ಚಾಲನೆ ನೀಡಲಾಗುತ್ತಿದೆ. ಒಂದು ತಿಂಗಳಲ್ಲಿ ಕೆಲಸ ಪೂರ್ಣಗೊಂಡು ಜನತೆಗೆ ಅನುಕೂಲವಾಗಲಿದೆ. ನಗರರಸಭೆ ಉಪಾಧ್ಯಕ್ಷ ಜುಗ್ನುಅಸ್ಲಂ, ಸದಸ್ಯ ಅಂಬರೀಶ್, ಮಾಜಿ ಸದಸ್ಯರಾದ ಶಫಿ, ಸಾಧಿಕ್, ಮುಖಂಡ ಮೇಸ್ತ್ರಿ ನಾರಾಯಣಸ್ವಾಮಿ ಇದ್ದರು.