ಕಾಮಗಾರಿಗಳಿಗೆ ಶಂಕುಸ್ಥಾಪನೆ ಗ್ರಾಮಸ್ಥರ ಕನಸು ನನಸು

ಕೋಲಾರ,ಮಾ,೨-ಹಲವಾರು ದಶಕಗಳಿಂದಲೂ ಮಣ್ಣು ರಸ್ತೆಯಲ್ಲೇ ಸಂಚಾರ ಮಾಡುತ್ತಿದ್ದ ಮಿಟ್ಟ ಕೊತ್ತೂರು ಗ್ರಾಮಕ್ಕೆ ಸಿಸಿ ರಸ್ತೆ, ಜತೆಗೆ ಸಿಸಿ ಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಅವರು ಚಾಲನೆ ನೀಡಿದ್ದು, ಗ್ರಾಮಸ್ಥರ ಬಹು ವರ್ಷಗಳ ಕನಸು ನನಸಾಗುತ್ತಿದ್ದು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಕೆ.ಜಿ.ಎಫ್. ತಾಲ್ಲೂಕು ವ್ಯಾಪ್ತಿಯ ಶ್ರೀನಿವಾಸಸಂದ್ರ ಗ್ರಾಪಂಯ ಬೆನ್ನಾವರ ಗ್ರಾಮದಲ್ಲಿ ಬಯಲು ಸೀಮೆ ಪ್ರಾಧಿಕಾರ ಅಭಿವೃದ್ಧಿ ಯೋಜನೆ ಮೂಲಕ ಮಿಟ್ಟ ಕೊತ್ತೂರು ಗ್ರಾಮಕ್ಕೆ ಸಿಸಿ ರಸ್ತೆ, ಸಿಸಿ ಚರಂಡಿ ೩೦ ಲಕ್ಷ ರೂ., ಹಾಗೂ ಬೆನ್ನವಾರ ಗ್ರಾಮದಲ್ಲಿ ಚರಂಡಿಗೆ ಸ್ಲಾಬ್ ಹಾಕಲು ೧೫ ಲಕ್ಷ ರೂ. ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿ ಅವರು ಮಾತನಾಡಿದರು.
ಆಂಧ್ರ ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಮೂಲಕ ಕಾಡಿ ಬೇಡಿ ಅನುದಾನ ಬಿಡುಗಡೆಗೊಳಿಸಿ ಮಾದರಿ ಗ್ರಾಮಗಳಾಗಿ ಪರಿವರ್ತನೆ ಮಾಡುತ್ತಿದ್ದೇನೆಂದು ಹೇಳಿದರು.
ಹಳ್ಳಿಗಳು ನಗರಪ್ರದೇಶದಂತೆ ಅಭಿವೃದ್ಧಿಯಾಗಬೇಕು, ಜನರಿಗೆ ಉತ್ತಮ ರಸ್ತೆ, ಆರೋಗ್ಯವಂತ ವಾತಾವರಣ ಸೃಷ್ಠಿ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರದ ಹಲವಾರು ಯೋಜನೆಗಳ ಮೂಲಕ ಅನುದಾನಗಳನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡುತ್ತಿದ್ದೇನೆಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಬಯಲು ಸೀಮೆ ಪ್ರಾಧಿಕಾರ ಅಭಿವೃದ್ಧಿ ಅಡಿಯಲ್ಲಿ ಕೆಜಿಎಫ್ ಕ್ಷೇತ್ರಕ್ಕೆ ೧ ಕೋಟಿ ರೂ., ಅನುದಾನ ಬಿಡುಗಡೆಗೊಳಿಸಿದ್ದು, ಇಂದು ೪೫ ಲಕ್ಷ ರೂ., ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇನ್ನುಳಿದ ೫೫ ಲಕ್ಷ ಕಾಮಗಾರಿಗಳಿಗೆ ಶೀಘ್ರದಲ್ಲೇ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆಂದು ಹೇಳಿದರು.
ಈ ಮಿಟ್ಟ ಕೊತ್ತೂರು ಗ್ರಾಮಸ್ಥರು ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚಾರ ಮಾಡಲು ತುಂಬಾ ಅನಾನುಕುಲವಿತ್ತು. ಈ ಗ್ರಾಮವು ಆಂಧ್ರ ಗಡಿಯಲ್ಲಿದ್ದು, ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು ಸಂತಸಗೊಂಡಿದ್ದಾರೆ, ತಾವು ಸದಾ ಅಭಿವೃದ್ಧಿಗೆ ಆಧ್ಯತೆ ನೀಡುವುದಾಗಿ ಭರವಸೆ ಕೊಟ್ಟರು.
ಆಂಧ್ರ ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಮೂಲಕ ಕಾಡಿ ಬೇಡಿ ಅನುದಾನ ಬಿಡುಗಡೆಗೊಳಿಸಿ ಮಾದರಿ ಗ್ರಾಮಗಳಾಗಿ ಪರಿವರ್ತನೆ ಮಾಡುತ್ತಿದ್ದೇನೆಂದು ಹೇಳಿದರು.
ಗುತ್ತಿಗೆದಾರರು ಗುಣಮಟ್ಟದಿಂದ ಕಾಮಗಾರಿಯನ್ನು ಕೈಗೊಳ್ಳಬೇಕು, ಸ್ಥಳೀಯರು ಖುದ್ದು ಹಾಜರಿದ್ದು, ಗುಣಮಟ್ಟ ಪರಿಶೀಲನೆ ಮಾಡಿ ರಸ್ತೆ ಹಾಕಿಸಿಕೊಳ್ಳಲು ಕರೆ ನೀಡಿದರು.