ಕಾಮಗಾರಿಗಲೂ ಗುಣಮಟ್ಟದ್ದಾಗಿರಲಿ- ಸಂಕನೂರ


ಧಾರವಾಡ,ಎ.20: ಎಲ್ಲ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿರಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಹೇಳಿದರು. ಸ್ಥಳೀಯ ಶಾಸಕರು ಅನುದಾನದ ಯೋಜನೆಯಡಿ ಮಠಕ್ಕೆ ಹುಬ್ಬಳ್ಳಿ ತಾಲೂಕಿನ ಬು. ಅರಳಿಕಟ್ಟಿಯ ಸದಾಶಿವ ಭೂಮಿಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಮಠಮಾನ್ಯಗಳು ಎಲ್ಲರೊಂದಿಗೆ ಸಹಬಾಳ್ವೆಯ ಜೀವನ ನಡೆಸಲು ಸಹಕರಿಸುವ ಕೊಂಡಿಗಳಂತೆ, ಇಲ್ಲಿ ಶಾಂತಿ,ಪ್ರೀತಿಯ ಪ್ರತೀಕದ ಕಣಜಗಳಿಂದಂತೆ, ಆದರೆ ಪ್ರಾಮಾಣಿಕತೆ, ಸತ್ಯ, ನಿμÉ್ಠ ಇದ್ದಾಗ ಮಾತ್ರ ಈ ಎಲ್ಲವೂ ಉದಯಿಸಲು ಸಾಧ್ಯ. ಅಲ್ಲದೆ ಕಾಮಗಾರಿಗಳ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ, ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಅಥವಾ ಲೋಪ ಕಂಡುಬಂದಲ್ಲಿ ಸಂಬಂದಪಟ್ಟವರ ವಿರುದ್ದ ಸೂಕ್ತ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಬಿಜೆಪಿ ಮಹಿಳಾ ಮುಖಂಡರಾದ  ಯಲ್ಲಮ್ಮ ಗಾಣಿಗೇರ,ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಹೇಮಾ ಗುಡದೂರು,ಜಿಲ್ಲಾ ಪಂಚಾಯತದ ಸದಸ್ಯರಾದ ಚೆನ್ನಮ್ಮ ಬಸನಗೌಡ ಶಿವನಗೌಡರ, ಸಹಾಯಕ ಅಭಿಯಂತರಾದ ಕುಮಾರಿ ಆಶಾ, ಆಪ್ತ ಸಹಾಯಕರಾದ ಮಾರ್ತಾಂಡಪ್ಪ ಎಮ್ ಕತ್ತಿ, ಊರಿನ ಹಿರಿಯರು, ತಾಲೂಕಾ ಪಂಚಾಯತದ ಸದಸ್ಯರು, ಗ್ರಾಮ ಪಂಚಾಯತದ ಸದಸ್ಯರು, ಸದಾಶಿವ ಮಠದ ಕಮಿಟಿ ಸದಸ್ಯರು, ಹಾಗೂ ತಾಯಂದಿರು ಹಾಜರಿದ್ದರು.