ದಾವಣಗೆರೆ.ಜೂ.೨೮; ಕಾಫಿ ಪುಡಿಯ ಬೆಲೆ ಗಗನಕ್ಕೆ ಏರಿದ್ದು, ಈ ಕುರಿತು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳ ಪಟ್ಡಿರುವ ಕರ್ನಾಟಕ ರಾಜ್ಯ ಕಾಫಿ ಮಂಡಳಿ ಈ ಕೂಡಲೇ ಮಧ್ಯ ಪ್ರವೇಶಿಸಿ ಕಾಫಿ ವರ್ತಕರ ಹಿತ ಕಾಯುವಂತೆ ದಾವಣಗೆರೆ ಜಿಲ್ಲಾ ಕಾಫಿ ಮತ್ತು ಟೀ ವರ್ತಕರ ಸಂಘದ ಅಧ್ಯಕ್ಷ ಸಿ.ಎ.ಶಿವರಾಂ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಇಂದಿನ ದರದಲ್ಲಿ ಕಾಫಿ ಖರೀದಿಸಿ ಕಾಫಿ ಸವಿಯಲು ಸಾಧ್ಯವಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕಲಬೆರಕೆ ಕಾಫಿಯು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇದರ ದುಷ್ಪರಿಣಾಮದಿಂದಾಗಿ ಕಾಫಿ ಕುಡಿಯುವವರ ಸಂಖ್ಯೆ ತುಂಬಾ ಕ್ಷೀಣಿಸುತ್ತದೆ, ಈ ಎಲ್ಲಾ ಸಮಸ್ಯೆಗಳನ್ನು ಈ ಕೂಡಲೇ ಕಾಫಿ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದರು.ಇಂದಿನ ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಧಾರಣೆಗಳು ವಿಪರೀತವಾಗಿ ಏರಿಕೆಯಾಗಿದೆ. ಇದರಿಂದ ಕೇವಲ ಕಾಫಿ ಬೆಳೆಗಾರರಿಗೆ ಮತ್ತು ಕಾಫಿ ರಫ್ತುದಾರರಿಗೆ ಮಾತ್ರ ಅನುಕೂಲವಾಗಿದೆ. ಈ ಸಂಬಂಧವಾಗಿ ಆಂತರಿಕ ಮಾರುಕಟ್ಟೆಯಲ್ಲಿ ಬೇಡಿಕೆಯು ಗಣನೀಯವಾಗಿ ಕುಸಿದ ಕಾರಣ ಸಣ್ಣ ಕಾಫಿ ವರ್ತಕರು ಮತ್ತು ರೋಸ್ಮರ್ಸ್ ಗಳು ಗಣನೀಯವಾಗಿ ನಷ್ಟ ಅನುಭವಿಸುತ್ತಿದ್ದು, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕೆಂದು ಕೋರಿದರು.ರಾಜ್ಯದಲ್ಲಿ ಬೆಳೆಯುವ ಕಾಫಿ ಪ್ರಮಾಣದಲ್ಲಿ ಶೇಕಡ ಹತ್ತರನ್ನು ಮಾತ್ರ ಆಂತರಿಕ ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿದೆ ಈ ಕಾರಣದಿಂದಾಗಿ ದಿನದಿಂದ ದಿನಕ್ಕೆ ಕಾಫಿ ಮಾರಾಟಗಾರರು ನಶಿಸಿದ್ದಾರೆ. ಈ ಹಿಂದೆ ದಾವಣಗೆರೆಯಲ್ಲಿ ಸುಮಾರು 34 ಕಾಫಿ ವರ್ತಕರು ಇದು ಇಂದು ಕೇವಲ ಬೆರಳಣಿಕೆಯನ್ನು ಉಳಿದಿದ್ದಾರೆ. ಇದೇ ರೀತಿ ಸಂಪೂರ್ಣ ರಾಜ್ಯದಲ್ಲಿ ಸಂಪೂರ್ಣವಾಗಿ ಕರ್ನಾಟಕದಲ್ಲಿ ಕಡಿಮೆ ಪ್ರಮಾಣಕ್ಕೆ ಇಳಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಬೆಲೆ ಏರಿಕೆಯಿಂದಾಗಿ ನಮಗೆ ಆಗುತ್ತಿರುವ ನಷ್ಟಕ್ಕೆ ಯಾವುದೇ ರೀತಿಯ ಪರಿಹಾರ ಸಿಗುತ್ತಿಲ್ಲ. ನಮ್ಮ ವ್ಯಾಪಾರಗಳನ್ನು ಉಳಿಸಿಕೊಳ್ಳಲು ನಷ್ಟದಲ್ಲೇ ವ್ಯವಹಾರ ಮಾಡುತ್ತಿದ್ದೇವೆ. ಲೈಸನ್ಸ್, ವಿದ್ಯುಚ್ಛಕ್ತಿ ಬೆಲೆಯ ಏರಿಕೆ, ಕಾರ್ಮಿಕರ ನಿರ್ವಹಣಾ ವಚ್ಚ ಇವುಗಳಿಂದ ತಯಾರಿಕ ವೆಚ್ಚವು ಅಧಿಕವಾಗುತ್ತಾ ಬಂದಿದ್ದು, ವ್ಯವಹಾರ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಹಿಂದೆ ಇದ್ದ ಕಾಫಿ ಮಂಡಳಿಯು ಆಂತರಿಕ ಬಳಕೆಗಾಗಿ ನಿಯಮಿತವಾಗಿ ನಿಗದಿತ ಬೆಲೆಗೆ ಕಾಫಿಯನ್ನು ಆಂತರಿಕ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿತ್ತು. ಅಲ್ಲದೇ ನಿಯಂತ್ರಣ ಮಾಡುತ್ತಿತ್ತು. ಈಗ ಈ ವಿಧಾನವು ಇರುವುದಿಲ್ಲ. ಈ ಕಾರಣಕ್ಕಾಗಿ ಕಾಫಿ ಕೇಂದ್ರ ಹಾಗು ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ನಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ,ಶೇಷಾದ್ರಿ ಪ್ರಸಾದ್,ಗಿರೀಶ್, ಬಲರಾಂ ಶೆಟ್ಟಿ,ಕಾಸಲ್ ಸತೀಶ್,ಬದ್ರಿನಾಥ್,ಶ್ರೀನಿವಾಸ್,ವಿರೇಶ್ ಪುರಾಣಿಕ್,ಸಿ.ವಿ ಮೋಹನ್,ಸಾಯಿಪ್ರಸಾದ್ ಉಪಸ್ಥಿತರಿದ್ದರು.