ಕಾಫಿವಿತ್ ಕರಣ್‌ನಲ್ಲಿ ನಟಿ ಕರೀನಾ

ಮುಂಬೈ, ಜು ೨೭- ಬಾಲಿವುಡ್ ನಟಿ ಕರೀನಾ ಕಪೂರ್ ಕಾಫಿ ವಿತ್ ಕರಣ್ ೭ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವುದಾಗಿ ಬಹಿರಂಗಪಡಿಸಿದ್ದಾರೆ.
ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ೭ ನಲ್ಲಿ ಕಾಣಿಸಿಕೊಳ್ಳುವುದಾಗಿ ಕರೀನಾ ಕಪೂರ್ ಖಚಿತಪಡಿಸಿದ್ದಾರೆ. ಮತ್ತು ಅದಕ್ಕಾಗಿ ಅವರು ಪರಿಪೂರ್ಣವಾದ ಉಡುಪನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ತಮ್ಮ ಮಾದಕ ನೋಟವನ್ನು ಹೊಂದಿದ್ದಾರೆಂದು ಬಹಿರಂಗಪಡಿಸಿದ್ದಾರೆ.
ಚಿತ್ರದಲ್ಲಿ, ಕರೀನಾ ಟಾಮ್ ಫೋರ್ಡ್ ಪ್ಯಾಂಟ್ ಮತ್ತು ಮ್ಯಾಚಿಂಗ್ ಬ್ಲ್ಯಾಕ್ ಬ್ಲೇಜರ್‌ನೊಂದಿಗೆ ಮಾದಕ ಕಪ್ಪು ಬ್ರಾಲೆಟ್ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕರೀನಾ ತನ್ನ ಮದುವೆಯ ಉಂಗುರಗಳು, ಬಳೆಗಳು ಮತ್ತು ಬಣ್ಣಬಣ್ಣದ ಉಗುರು ಬಣ್ಣವನ್ನು ಹಚ್ಚಿಕೊಂಡು ಕಣ್ಣುಕುಕ್ಕುವಂತೆ ಸಿಂಗರಿಸಿಕೊಂಡಿದ್ದಾರೆ. ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಂತೆ ಬೆಬೋ ಕೆಲವು ಪವರ್ ಪುಲ್ ಆಗಿ ಕಾಣಿಸಿಕೊಂಡಿದ್ದಾರೆ ಅದಕ್ಕೆ ನಾನು ನನ್ನ ಕಾಫಿ ಕಪ್ಪು ಇಷ್ಟಪಡುತ್ತೇನೆ ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
ಕರೀನಾ ಈ ಕಾರ್ಯಕ್ರಮದಲ್ಲಿ ಒಬ್ಬರೇ ಅಥವಾ ಜೊತೆಗಾರ್ತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏತನ್ಮಧ್ಯೆ, ಲಾಲ್ ಸಿಂಗ್ ಚಡ್ಡಾ ಸಹನಟ ಅಮೀರ್ ಖಾನ್ ಜೊತೆ ಕಾರ್ಯಕ್ರಮಕ್ಕಾಗಿ ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ.