ಕಾನ್ ಚಿತ್ರೋತ್ಸವದಲ್ಲಿ ಕನ್ನಡ ಕಿರುಚಿತ್ರಕ್ಕೆ ಪ್ರಶಸ್ತಿ

ಮೈಸೂರು,ಮೇ.೨೪- ‘ಸನ್ ಫ್ಲವರ್ಸ್ ವೇರ್ ದ ಫಸ್ಟ್ ಒನ್ಸ್ ಟು ನೋ’ ಎಂಬ ಕಿರುಚತ್ರವು ಮೊದಲ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ಕಾನ್ ಫಿಲ್ಮ್ ಫೆಸ್ಟಿವೆಲ್ ಗೆಆಯ್ಕೆಯಾಗಿತ್ತು.ಇಂಥದ್ದೊಂದು ಫಿಲ್ಮ್ ಫೆಸ್ಟಿವೆಲ್ ಗೆ ಆಯ್ಕೆಯಾದ ಮೊದಲ ಕನ್ನಡಿಗರ ಕಿರುಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ.ಚಿದಾನಂದ ನಾಯಕ್ ರವರ ನಿರ್ದೇಶನದಲ್ಲಿ ಕಿರುಚಿತ್ರವು ಮೂಡಿಬಂದಿದೆ.ಇವರು ಮೂಲತಃ ಮೈಸೂರಿನವರಾಗಿದ್ದು,ರಚನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಚಿದಾನಂದ ನಿರ್ವಹಿಸಿದ್ದಾರೆ.ಈ ಕಿರುಚಿತ್ರಕ್ಕೆ ವಿ. ಮನೋಜ್ ಅವರ ಸಂಕಲನವಿದೆ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅಲ್ಲದೇ ಕನ್ನಡದ ಅನೇಕ ಕಲಾವಿದರು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.ಕಾನ್ ಚಿತ್ರೋತ್ಸವಕ್ಕೆ ತಮ್ಮ ಕಿರುಚಿತ್ರ ಆಯ್ಕೆಯಾಗಿರುವುದು ಸಹಜವಾಗಿಯೇ ಚಿದಾನಂದ್ ಅವರಿಗೆ ಸಂಭ್ರಮವನ್ನು ತಂದುಕೊಟ್ಟಿದೆ .ಕೊನೆಗೂ ಕನ್ನಡದ ಹುಡುಗ ಗೆದ್ದಿದ್ದಾನೆ. ಈ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾನೆ.