
ಆಲಮೇಲ:ಜು.23:ಮೊಹರಂ ಹಬ್ಬವು ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಸಹೋದರತ್ವದೊಂದಿಗೆ ಶಾಂತತೆಯಿಂದ ಹಬ್ಬ ಆಚರಿಸಿ.ಒಂದು ವೇಳೆ ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸ ಮಾಡುವದನ್ನು ಕಂಡು ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಮೂಲಾಜೀ ಇಲ್ಲದೇ ಕಾನೂನು ಕ್ರಮ ಜರುಗಿಸಲಾಗುವದು ಎಂದು ಪಿಎಸ್ ಐ ಕುಮಾರ ಹಾಡಕಾರ ಸಲಹೆ ನಿಡಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ನಡೆದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನೋದ್ದೇಶಿಸಿ ಮಾತನಾಡಿದ ಅವರು ಮೊಹರಂ ಕೇವಲ ಮುಸಲ್ಮಾನರ ಹಬ್ಬವಾಗಿರದೇ ಅದು ಹಿಂದೂ – ಮುಸ್ಲಿಂ ಭಾವೈಕ್ಯತೆಯ ಸೌಹಾರ್ದಯುತ ಹಬ್ಬವಾಗಿ ಈಭಾಗದಲ್ಲಿ ನಡೆದುಕೊಂಡು ಬಂದಿದೆ. ಅದರಲ್ಲಿಯೂ ವಿಶೇಷವಾಗಿ ಮೊಹರಂ ಹಬ್ಬದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದರಿಂದ ಅದು ಕೇವಲ ಒಂದು ಸಮುದಾಯದ ಹಬ್ಬವಾಗಿರದೇ ಸಾರ್ವತ್ರಿಕ ಹಬ್ಬವಾಗಿದೆ. ಅದಕ್ಕಾಗಿ ಎಲ್ಲರೂ ಸಹೋದರತ್ವದೊಂದಿಗೆ ಹಬ್ಬ ಆಚರಿಸಿ
ಹಬ್ಬದ ದಿನದಂದು ಡಾಲ್ಬಿ ನಿಷೇಧಿಸಲಾಗಿದೆ. ಯಾರು ¨ಳಸಬೇಡಿ.ಹಾಗೂ ಪಂಜೆ ಕೂಡಿಸುವ ಸ್ಥಳದಲ್ಲಿ ಆಯಾ ಮಸೋತಿಯ ಪದಾಧಿಕಾರಿಗಳು ಜಾಗ್ಥತಿ ವಹಿಸಿ ಸರ್ಕಾರದ ನಿಯಮ ಪಾಲಿಸಿ. ನಿಮ್ಮ ಜೊತೆ ನಮ್ಮ ಸಿಬ್ಬಂದಿಗಳು ಕೂಡಾ ಇರುತ್ತಾರೆ ಎಂದರು. ಈ ಸಂದರ್ಭದಲ್ಲಿ ಡಾಂಗೆ ಮಸೋತಿಯ ಗುರುಗಳಾದ ಗಾಲೀಬ ಡಾಂಗೆ ಮಾತನಾಡಿ ಸರ್ಕಾರದ ಆದೇಶದಂತೆ ನಾವು ಹಬ್ಬ ಆಚರಿಸುತ್ತೆವೆ ಎಂದರು.
ಶಾಂತಿ ಸಭೆಯಲ್ಲಿ ಅಪರಾಧ ವಿಭಾಗದ ಪಿಎಸ್ ಐ ಎನ್.ಜಿ.ಅಪನಾಯ್ಕರ ಹಿರಿಯರಾದ ಬಡೇಸಾಬ ದಿಕ್ಕಸಂಗಿ, ಶ್ರೀಶೈಲ ನಾವದಗಿ,ಶಕೀಲ ಮಕಾನದಾರ,ಇಸ್ಮಾಯಿಲ ಮಕಾನದಾರ, ಗಾಲೀಬ ಮಕಾನದಾರ,ಬಾಂಡ ಪ್ಯಾಟಿ, ಹಾಗೂ ಸಿಬ್ಬಂದಿಗಳಾದ ಎಸ್.ಎಸ್.ಬಾಪಗೊಂಡ, ಆರ್.ಎನ್.ಪಾಟೀಲ, ಬಿ.ಎಸ್.ನಿಕ್ಕಂ.ದಸ್ತಗೀರ ತರಫದಾರ.ಆರ್.ಎಸ್ ಪಾಟೀಲ,ಸುರೇಂದ್ರ ಪಾಟೀಲ.ಸಾವಳೇಶ ಕಾನಡೇ,ಸಿದ್ದು ದಿಂಡವಾರ,ರೋಹಿತ ಗೋಡೆಕರ.ಇದ್ದರು.