ಕಾನೂನು ವಿವಿ ಕೌನ್ಸಿಲ್‍ಗೆ ಚಂದ್ರಿಕಾ ನೇಮಕ

ಬಾಗಲಕೋಟೆ,ನ.11: ಬವಿವ ಸಂಘದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎಂ.ಪಿ.ಚಂದ್ರಿಕಾ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನಾಮಕರಣಗೊಂಡಿದ್ದಾರೆ. ಈವರೆಗೆ ಸದಸ್ಯರಾಗಿದ್ದ ಬೆಂಗಳೂರ ಆಕ್ಸಫರ್ಡ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವೇದಾಶ್ರೀ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಕುಲಪತಿಗಳು ಈ ನೇಮಕ ಮಾಡಿ ಆದೇಶಿಸಿದ್ದಾರೆಂದು ಕುಲಸಚಿವರು ಪ್ರಕಟಿಸಿದ್ದಾರೆ.
ಬವಿವ ಸಂಘದ ಕಾರ್ಯಾಧ್ಯಕ್ಷ ಶಾಸಕ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಅವರುಗಳು ಚಂದ್ರಿಕಾ ಅವರನ್ನು ಅಭಿನಂಧಿಸಿದ್ದಾರೆ.